ADVERTISEMENT

ಹೂಡಿ ಗ್ರಾಮದಲ್ಲಿ ಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:53 IST
Last Updated 8 ಮೇ 2025, 15:53 IST
<div class="paragraphs"><p>ಹೂಡಿಯಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು</p></div>

ಹೂಡಿಯಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು

   

ಕೆ.ಆರ್.ಪುರ: ಹೂಡಿ ಗ್ರಾಮದಲ್ಲಿ ಶ್ರೀಲಕ್ಷ್ಮೀನಾರಾಯಣಸ್ವಾಮಿಯ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮುಂಜಾನೆಯಿಂದಲೇ ಉತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಬ್ರಹ್ಮರಥೋತ್ಸವ ಪ್ರಯುಕ್ತ ದೇವರಿಗೆ ಮತ್ತು ರಥಕ್ಕೆ ವಿವಿಧ ಬಗೆಯ ಹೂವಿನ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ನಡೆದವು.

ADVERTISEMENT

ಹೂಡಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ತಮಟೆ ,ಡೊಳ್ಳು ಕುಣಿತ, ಬೊಂಬೆ‌ ಕುಣಿತ, ಮಂಗಳವಾದ್ಯ ತಂಡದ ನೃತ್ಯ ಪ್ರದರ್ಶನ ರಥೋತ್ಸವಕ್ಕೆ ಮೆರಗು ನೀಡಿದವು. ತಮ್ಮ ಕಷ್ಟಗಳು ಪರಿಹಾರ ಸೇರಿದಂತೆ ವಿವಿಧ ರೀತಿಯ ಇಷ್ಟಾರ್ಥ ಪ್ರಾಪ್ತಿಗಾಗಿ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಈಡೇರಿಸಿಕೊಂಡರು. ಭಕ್ತರಿಗೆ ಪಾನಕ, ಮಜ್ಜಿಗೆ ಕೊಸಂಬರಿ ವಿತರಿಸಲಾಯಿತು.

ರಾಜಪಾಳ್ಯ, ಸಾದರಮಂಗಲ, ಕೊಡಿಗೆಹಳ್ಳಿ, ತಿಗಳರಪಾಳ್ಯ, ಸಿಂಗಯ್ಯನಪಾಳ್ಯ, ಗರುಡಚಾರಪಾಳ್ಯ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ರೆಡ್ಡಿ, ಹರಿಹರ ತಾಲೂಕಿನ ಎರೆಹಳ್ಳಿಯ ರೆಡ್ಡಿ ಗುರುಪೀಠದ ಶ್ರೀವೇಮಾನಾನಂದಾ ಸ್ವಾಮೀಜಿ, ಶಾಸಕಿ ಮಂಜುಳಾ ಲಿಂಬಾವಳಿ, ಮುಖಂಡರಾದ ಎಚ್.ವಿ.ಮಂಜುನಾಥ್, ಹೆಚ್.ಎಸ್.ಕಬಡ್ಡಿ ಪಿಳ್ಳಪ್ಪ, ಬಿ.ಎನ್.ನಟರಾಜ್, ಎಚ್.ಎಸ್.ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.