ADVERTISEMENT

ಬೆಂಗಳೂರು ಸುತ್ತಮುತ್ತ ಮುಂದುವರಿದ ಕಾರ್ಯಾಚರಣೆ: 5 ಎಕರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 23:55 IST
Last Updated 26 ಸೆಪ್ಟೆಂಬರ್ 2025, 23:55 IST
<div class="paragraphs"><p>ಎ.ಐ. ಚಿತ್ರ</p></div>

ಎ.ಐ. ಚಿತ್ರ

   

ಬೆಂಗಳೂರು: ಬೆಂಗಳೂರು ನಗರವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿರುವ ಜಿಲ್ಲಾಡಳಿತವು ಅಂದಾಜು ₹7.69 ಕೋಟಿ ಮೌಲ್ಯದ 5 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ.

ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ಸ್ಮಶಾನ, ಸರ್ಕಾರಿ ಓಣಿ, ಖರಾಬು, ಗೋಮಾಳ ಮತ್ತು ಕೆರೆ ಜಾಗಗಳನ್ನು ಶುಕ್ರವಾರ ತೆರವುಗೊಳಿಸಿದರು.

ADVERTISEMENT

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ದೇವಗೆರೆ ಗ್ರಾಮದ ಸ.ನಂ 71ರ 0.22 ಗುಂಟೆ ಗುಂಡುತೋಪು ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಅಂದಾಜು ಮೌಲ್ಯ ₹50 ಲಕ್ಷ.

ತಾವರೆಕೆರೆ ಹೋಬಳಿ ದೊಡ್ಡೇರಿ ಗ್ರಾಮದ ಸ.ನಂ 62ರ ಸ್ಮಶಾನವಾಗಿದ್ದ ₹19 ಲಕ್ಷ ಮೌಲ್ಯದ 0.05 ಗುಂಟೆ ಒತ್ತುವರಿ ತೆರವುಗೊಳಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಎ ರ 0.02.08 ಗುಂಟೆ ಸರ್ಕಾರಿ ಓಣಿ ತೆರವು ಮಾಡಲಾಗಿದೆ. ಇದರ ಅಂದಾಜು ಮೌಲ್ಯ ₹ 20 ಲಕ್ಷ.

ದಾಸನಪುರ ಹೋಬಳಿಯ ಶಿವನಪುರ ಗ್ರಾಮದ ಸ.ನಂ 2/4ಬಿ1ರ  ₹10 ಲಕ್ಷ ಮೌಲ್ಯದ  0.012 ಗುಂಟೆ ಸರ್ಕಾರಿ ಓಣಿ ಒತ್ತುವರಿ ತೆರವುಗೊಳಿಸಲಾಗಿದೆ.

ಹೊಸಹಳ್ಳಿಪಾಳ್ಯ ಗ್ರಾಮದ ಸ.ನಂ 40 ರ ₹2 ಕೋಟಿ ಮೌಲ್ಯದ 2 ಎಕರೆ ಬಿಳಿಕೆರೆ ಜಾಜಿಮುಳಗಡೆ ಒತ್ತುವರಿ ತೆರವುಗೊಳಿಸಲಾಗಿದೆ.

ತೊರೆನಾಗಸಂದ್ರ ಗ್ರಾಮದ ಸ.ನಂ 34 ರ ₹1.50 ಕೋಟಿ ಮೌಲ್ಯದ 0.27 ಗುಂಟೆ ಖರಾಬು ಒತ್ತುವರಿ ತೆರವು ಮಾಡಲಾಗಿದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ-1 ಹೋಬಳಿಯ ಕೊಡಿಗೆ ತಿರುಮಳಾಪುರ ಗ್ರಾಮದ ಸ.ನಂ 14ರ 0.31 ಗುಂಟೆ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ. ಇದರ ಮೌಲ್ಯ ₹1.20 ಕೋಟಿ.

ಹೆಸರಘಟ್ಟ-2 ಹೋಬಳಿಯ ಕಾಕೋಳು ಗ್ರಾಮದ ಸ.ನಂ 44ರ ₹ 2 ಕೋಟಿ ಮೌಲ್ಯದ 1 ಎಕರೆ ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.