ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹32.72 ಕೋಟಿ ಅಂದಾಜು ಮೌಲ್ಯದ ಒಟ್ಟು 10 ಎಕರೆ 0.37 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು.
ಗೋಮಾಳ, ಸ್ಮಶಾನ, ಕರೆ, ಚೌಳಕುಂಟೆ, ಗುಂಡುತೋಪು, ಕುಂಟೆ, ಸರ್ಕಾರಿ ಸ್ಮಶಾನ, ಸರ್ಕಾರಿ ಕೊರಕಲು ಮತ್ತು ಖರಾಬು ಜಾಗಗಳ ಒತ್ತುವರಿಯನ್ನು ತೆರವು ಕಾರ್ಯಾಚರಣೆ ನಡೆಯಿತು.
ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಟ್ಟೊಗೊಲ್ಲಹಳ್ಳಿ ಗ್ರಾಮದಲ್ಲಿ ಗೋಮಾಳ, ವರ್ತೂರು ಹೋಬಳಿಯ ಕೈಕೊಂಡ್ರಹಳ್ಳಿ ಗ್ರಾಮದಲ್ಲಿ ಸ್ಮಶಾನ, ಆನೇಕಲ್ ತಾಲ್ಲೂಕಿನ ಕಸಬಾ-1 ಹೋಬಳಿಯ ಸಿಡಿಹೊಸಕೋಟೆ ಗ್ರಾಮದಲ್ಲಿ ಸರ್ಕಾರಿ ಭೂಮಿ, ಕಸಬಾ-2 ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗ, ಜಿಗಣಿ-1 ಹೋಬಳಿಯ ಬುಕ್ಕಸಾಗರ ಗ್ರಾಮದಲ್ಲಿ ಗುಂಡುತೋಪು, ಜಿಗಣಿ-2 ಹೋಬಳಿಯ ಹುಲಿಮಂಗಲ ಗ್ರಾಮದಲ್ಲಿ ಗೋಮಾಳ, ಸರ್ಜಾಪುರ-1 ಹೋಬಳಿಯ ಕೂಗೂರು ಗ್ರಾಮದಲ್ಲಿ ಕುಂಟೆ, ಸರ್ಜಾಪುರ-2 ಹೋಬಳಿಯ ಮುತ್ತನಲ್ಲೂರು ಗ್ರಾಮದಲ್ಲಿ ಗುಂಡುತೋಪು, ಸರ್ಜಾಪುರ-3 ಹೋಬಳಿಯ ಕೊಮ್ಮಸಂದ್ರ ಗ್ರಾಮದಲ್ಲಿ ಸ್ಮಶಾನದಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಸ್ಮಶಾನ, ದೊಡ್ಡೇರಿ ಗ್ರಾಮದಲ್ಲಿ ಗುಂಡುತೋಪು, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದಲ್ಲಿ ಗುಂಡುತೋಪು, ಕೆಂಗೇರಿ ಹೋಬಳಿಯ ಸೋಂಪುರ ಗ್ರಾಮದಲ್ಲಿ ಗುಂಡುತೋಪು ಒತ್ತುವರಿಯನ್ನು ತೆರವು ಮಾಡಲಾಯಿತು.
ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಗುಂಡುತೋಪು, ಹಾರೋಕ್ಯಾತನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕೊರಕಲು, ಖರಾಬು, ಹುಲ್ಲೇಗೌಡನಹಳ್ಳಿ ಗ್ರಾಮದಲ್ಲಿ ಖರಾಬು, ತೋರನಾಗಸಂದ್ರ ಗ್ರಾಮದಲ್ಲಿ ಖರಾಬಿನಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಯಿತು.
ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಗ್ರಾಮದಲ್ಲಿ ಗೋಮಾಳ, ಜಾಲ ಹೋಬಳಿಯ ನೆಲ್ಲಕುಂಟೆ ಗ್ರಾಮದಲ್ಲಿ ಗೋಮಾಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.