ADVERTISEMENT

ಬೆಂಗಳೂರು: ಯುವ‌ ಪುಸ್ತಕ ಸರಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:30 IST
Last Updated 13 ಜುಲೈ 2025, 23:30 IST
ಫೌಂಡೇಷನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಚರಲ್ ರಿಸರ್ಚ್ ನಗರದಲ್ಲಿ ಆಯೋಜಿಸಿದ್ದ ‘ಯುವ ಪುಸ್ತಕ ಸರಣಿ’ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಸ್ಪರ ಶುಭಾಶಯ ಹಂಚಿಕೊಂಡರು. ವಿಕ್ರಮ್ ಸಂಪತ್ ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಫೌಂಡೇಷನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಚರಲ್ ರಿಸರ್ಚ್ ನಗರದಲ್ಲಿ ಆಯೋಜಿಸಿದ್ದ ‘ಯುವ ಪುಸ್ತಕ ಸರಣಿ’ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರಸ್ಪರ ಶುಭಾಶಯ ಹಂಚಿಕೊಂಡರು. ವಿಕ್ರಮ್ ಸಂಪತ್ ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತೀಯ ಇತಿಹಾಸ ಮತ್ತು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ (ಎಫ್‌ಐಎಚ್‌ಸಿಆರ್‌) ಹಾಗೂ ಓಲಾ ಫೌಂಡೇಷನ್ ಆಶ್ರಯದಲ್ಲಿ ‘ಯುವ ಪುಸ್ತಕ ಸರಣಿ’ಗೆ ಹೆಬ್ಬಾಳದ ಕೋರ್ಟ್‌ಯಾರ್ಡ್ ಮ್ಯಾರಿಯಟ್‌ನಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಪ್ರಾಚೀನ ನಾಗರಿಕತೆಗಳಿಂದ ಆರಂಭಿಸಿ ಮಧ್ಯಕಾಲೀನ ರಾಜವಂಶಗಳು, ನಾಯಕರು, ಹಾಗೂ ಸಾಂಸ್ಕೃತಿಕ ಘಟ್ಟಗಳವರೆಗೆ ವಿಷಯಗಳನ್ನು ಸುಂದರ ಚಿತ್ರಣದೊಂದಿಗೆ ಮಕ್ಕಳಿಗೆ ಇತಿಹಾಸವನ್ನು ತಿಳಿಸುವ ಸರಣಿ ಇದಾಗಿದೆ. ಪುಸ್ತಕಗಳು ಏಕಕಾಲದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ ಹಾಗೂ ಆಂಗ್ಲದಲ್ಲಿ ಪ್ರಕಟವಾಗಿವೆ.

ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಮಾತನಾಡಿ, ‘ಇತಿಹಾಸವೇ ನಮ್ಮ ಭಾಷೆ, ನಮ್ಮ ಸಂಸ್ಕೃತಿ. ಮಾತ್ರವಲ್ಲ ನಮ್ಮ ನಡವಳಿಕೆಯ ಬೆನ್ನೆಲುಬು. ಮಕ್ಕಳಿಗೆ ಇತಿಹಾಸವನ್ನು ಸರಳವಾಗಿ, ಕಥೆಗಳ ಮೂಲಕ ಕಲಿಸಲು ಇಂತಹ ಪುಸ್ತಕಗಳು ಬಹಳ ಅವಶ್ಯಕ’ ಎಂದು ಹೇಳಿದರು.

ADVERTISEMENT

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಮಕ್ಕಳಲ್ಲಿ ಇತಿಹಾಸದ ಬಗ್ಗೆ ಕುತೂಹಲ ಬೆಳೆಸುವ ಇಂತಹ ಯೋಜನೆಗಳು, ದೇಶದ ಭವಿಷ್ಯವನ್ನು ಉತ್ತಮಗೊಳಿಸಲಿದೆ’ ಎಂದರು.

ಸದ್ಗುರು ಮಧುಸೂದನ್ ಸಾಯಿ, ಲೇಖಕ ವಿಕ್ರಮ್‌ ಸಂಪತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.