ADVERTISEMENT

ಮೌಢ್ಯ ಹೆಚ್ಚಿಸುವ ಜಾಹೀರಾತು: ಕಾನೂನು ಕ್ರಮ ಕೈಗೊಳ್ಳಲು ಲಾ ಪೀಪಲ್ ಟ್ರಸ್ಟ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 23:14 IST
Last Updated 15 ಜುಲೈ 2025, 23:14 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಂತ್ರ, ತಂತ್ರ, ವಶೀಕರಣ, ವಾಮಾಚಾರದ ಮೂಲಕ ಸಮಾಜದಲ್ಲಿ ಮೌಢ್ಯ ಹೆಚ್ಚಿಸುವ
ಜಾಹೀರಾತುಗಳನ್ನು ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಗೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಾ ಪೀಪಲ್ ಟ್ರಸ್ಟ್ ಆಗ್ರಹಿಸಿದೆ. 

ADVERTISEMENT

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ಗೋವರ್ಧನ್ ಸಿ., ‘ಇತ್ತೀಚೆಗೆ ಕೆಲವು ಜೋತಿಷಿಗಳು, ಮಾಂತ್ರಿಕರು, ಬಾಬಾಗಳು, ಸ್ವಾಮೀಜಿಗಳ ವೇಷಧರಿಸಿ ಸಾಮಾಜಿಕ ಮಾಧ್ಯಮ
ಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಸ್ತ್ರೀ ವಶೀಕರಣ, ಸತಿಪತಿ ಕಲಹ, ವ್ಯಾಪಾರ ಉದ್ಯೋಗದ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂಬ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.