ADVERTISEMENT

ಸರ್ಕಾರಗಳಿಂದ ಮಾರಕ ‘ಎನ್‌ಪಿಎಸ್‌’ ಜಾರಿ: ಬಸವರಾಜ ಹೊರಟ್ಟಿ

ವಿಧಾನ ಪರಿಷತ್ ಸಭಾಪತಿ‌ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:45 IST
Last Updated 11 ಡಿಸೆಂಬರ್ 2021, 19:45 IST
ಕೋವಿಡ್‌ ಸೇನಾನಿಗಳಾದ (ಕುಳಿತವರು ಎಡದಿಂದ) ಗಂಗಮ್ಮ , ಚನ್ನಮ್ಮ, ರುದ್ರೇಗೌಡ ಚಿಕ್ಕರೆಡ್ಡಿ , ಮಹದೇಶ್ ವರ್ಮಾ, ಲಿಂಗರಾಜು, ಆರ್.ಎಸ್ ದೀಪಕ್ ಸಿಂಗ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. (ನಿಂತವರು ಎಡದಿಂದ) ಒಕ್ಕೂಟದ ಸದಸ್ಯ ಕುಳ್ಳೇಗೌಡ, ಕಾರ್ಯದರ್ಶಿ ಶೋಭಾ ಲೋಕನಾಗಣ್ಣ, ಎನ್.ಇ.ನಟರಾಜ್, ಎಐಎಸ್‌ಜಿಇಎಫ್‌ನ ಅಧ್ಯಕ್ಷ ಸುಭಾಷ್ ಲಂಬಾ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರೋಶಿನಿ ಗೌಡ, ಮಹದೇವಯ್ಯ ಮಠಪತಿ, ಶ್ರೀಕುಮಾರ್, ಶಿಕ್ಷಕಿ ಶೈಲಜಾ, ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ವಿ.ಕಮಲಾಕ್ಷಿ ಮತ್ತು ಅಭಿವೃದ್ಧಿ ಅಧಿಕಾರಿ ಟಿ.ಆರ್.ವೇದವತಿ ಇದ್ದರು -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸರ್ಕಾರಿ ನೌಕರರಿಗೆ ಮಾರಕ ಹಾಗೂ ಅಪ್ರಯೋಜಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ಸರ್ಕಾರಗಳೇ ಜಾರಿ ಮಾಡಿರುವುದು ನೋವಿನ ಸಂಗತಿ’ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ‌ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು (ಎಐಎಸ್‌ಜಿಇಎಫ್‌)ಶನಿವಾರ ಆಯೋಜಿಸಿದ್ದ ‘ನೂತನ ಪಿಂಚಣಿ ಯೋಜನೆ ರದ್ದತಿ ಮತ್ತು ಹೊರಗುತ್ತಿಗೆ ಉದ್ಯೋಗ’ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎನ್‌ಪಿಎಸ್‌ನ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿ ವರದಿ ನೀಡಲು2018ರಲ್ಲಿಸರ್ಕಾರಸಮಿತಿ ರಚಿಸಿತ್ತು. ಆದರೆ, ಸಮಿತಿಈವರೆಗೆ ವರದಿ ಸಲ್ಲಿಸಿಲ್ಲ. ಸಮಿತಿ ಕಾಲಹರಣ ಮಾಡದೆ,ಸರ್ಕಾರಿ ನೌಕರರ ಒಳಿತಿಗಾಗಿ ಸ್ಪಷ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಎನ್‌ಪಿಎಸ್‌ನಲ್ಲಿ ನಿಶ್ಚಿತ ಕುಟುಂಬ ಪಿಂಚಣಿಗೆ ಹಾಗೂ ಪಿಂಚಣಿಪರಿಷ್ಕರಣೆಗೆ ಅವಕಾಶ ಇರುವುದಿಲ್ಲ. ನೌಕರರು ಅಕಾಲಿಕ ಮರಣ ಹೊಂದಿದರೆ, ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆಯೂ ಇರುವುದಿಲ್ಲ. ಸರ್ಕಾರಿ ನೌಕರರಲ್ಲಿಎನ್‌ಪಿಎಸ್‌ ತಾರತಮ್ಯ ಸೃಷ್ಟಿಸುತ್ತದೆ.ಎನ್‌ಪಿಎಸ್‌ ರದ್ದುಗೊಳಿಸುವ ಕುರಿತು ವಿಧಾನ ಪರಿಷತ್‌ನಲ್ಲಿವಿಷಯ ಬಂದರೆ, ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ,‘ಎನ್‌ಪಿಎಸ್‌ ಅನ್ನು ನೂತನ‍ಪಿಂಚಣಿ ಯೋಜನೆ ಎನ್ನುವ ಬದಲಿಗೆ ‘ಪಿಂಚಣಿ ಇಲ್ಲದ ಯೋಜನೆ’ ಎನ್ನಬೇಕು. ಸರ್ಕಾರಿ ನೌಕರರ ಉಳಿವಿಗೆ ಎನ್‌ಪಿಎಸ್‌ ರದ್ದಾಗಿ ಹಳೆಯ ಪಿಂಚಣಿ ಯೋಜನೆಯನ್ನೇ (ಒಪಿಎಸ್‌) ಮತ್ತೆ ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎನ್.ಇ.ನಟರಾಜ್,‘ಸರ್ಕಾರಿ ನೌಕರರ ಮೇಲೆಹೊರಗುತ್ತಿಗೆ ತೀವ್ರ ಪರಿಣಾಮ ಬೀರುತ್ತಿದೆ. ಸರ್ಕಾರಿ ವಲಯದಿಂದ ಹೊರಗುತ್ತಿಗೆ ಪದ್ಧತಿಯನ್ನು ತೊಲಗಿಸಬೇಕು. ಸದ್ಯ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.