ADVERTISEMENT

ವೀಸಾ ಅವಧಿ ಮುಕ್ತಾಯ: ಲಿಬಿಯಾ ಪ್ರಜೆ ಬಂಧನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 8:58 IST
Last Updated 12 ಫೆಬ್ರುವರಿ 2020, 8:58 IST

ಬೆಂಗಳೂರು: ವೀಸಾ ಅವಧಿ ಮುಗಿದು ವರ್ಷ ಕಳೆದಿದ್ದರೂ ಸ್ವದೇಶಕ್ಕೆ ಹಿಂತಿರುಗದ ಆರೋಪದ ಮೇಲೆ 35 ವರ್ಷದ ಲಿಬಿಯಾದ ರಾಷ್ಟ್ರೀಯನೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ಎಸ್‌.ಎ. ಸಯೀದ್‌ ಶಾಕ್ರಾ ಎಂದು ಗುರುತಿಸಲಾಗಿದೆ. ಇವರು ಕಮ್ಮನಹಳ್ಳಿ ಎ.ಕೆ ಕಾಲೋನಿಯಲ್ಲಿ ವಾಸವಾಗಿದ್ದರು. ತಮ್ಮ ಸರಹದ್ದಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಬಾಣಸವಾಡಿ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ವೆಂಕಟೇಶ್‌ ಬಿ.ಎಂ. ಈ ಸಂಬಂಧ ದೂರು ನೀಡಿದ್ದಾರೆ.

‘ಖಾಸಗಿ ಕಾಲೇಜಿನಲ್ಲಿ ಪಿಎಚ್‌.ಡಿಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಶಾಕ್ರಾ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಯನ್ನು ಲಿಬಿಯಾಕ್ಕೆ ವಾಪಸ್‌ ಕಳುಹಿಸಲು ನ್ಯಾಯಾಲಯದ ಆದೇಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.