ದಾಬಸ್‌ಪೇಟೆ: ‘ಉತ್ತಮ ಆರೋಗ್ಯಕ್ಕಾಗಿ ಹಲವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಮೆಚ್ಚುವಂತಹ ಕಾರ್ಯ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಸೋಂಪುರ ಹೋಬಳಿ ಹನುಮಂತಪುರ ಗ್ರಾಮದ ಹೊರವಲಯದಲ್ಲಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೋದಿ ನಗರದ ಸರ್ವಿಸ್ ಫೌಂಡೇಶನ್ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಲಯನ್ಸ್ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
’ಡಾ.ಸುನೀಲ್ ಗೌಡ ಮತ್ತು ತಂಡದವರು ಈ ಆಸ್ಪತ್ರೆ ಮೂಲಕ ಪ್ರತಿ ಶನಿವಾರ ಮತ್ತು ಭಾನುವಾರದಂದು ಗ್ರಾಮೀಣ ಜನತೆಗೆ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಿರುವ ಅರ್ಥಪೂರ್ಣವಾಗಿದೆ’ ಎಂದರು.
‘ಲಯನ್ಸ್ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮಂಜುಳಾ ಸುರೇಶ್ ಕುಟುಂಬ ಜಮೀನು ದಾನ ನೀಡುವ ಮೂಲಕ ಆರೋಗ್ಯ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಸಾಮಾಜಿಕವಾಗಿ ಇದೊಂದು ಉತ್ತಮ ಬೆಳವಣಿಗೆ’ ಎಂದು ಶ್ಲಾಘಿಸಿದರು.
ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317ಎ ಜಿಲ್ಲಾ ಗವರ್ನರ್ ಎನ್.ಮೋಹನ್ ಕುಮಾರ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರಿನ ಮೋದಿನಗರ ಸೇವಾ ಸಂಸ್ಥೆಯ ಚೇರ್ಮನ್ ಹೆಚ್.ಎನ್.ಶಿವನಂಜಯ್ಯ, ಪ್ರಾಂತೀಯ ಅಧ್ಯಕ್ಷ ಎಸ್. ಮನೋಜ್ ಕುಮಾರ್, ಕಾರ್ಯದರ್ಶಿ ಸೀತಾರಾಮುಡು ಚಿತ್ತುರಿ, ಖಜಾಂಚಿ ಕೆ.ನರಸಣ್ಣ, ಯೂರಾಲಜಿಸ್ಟ್ ಡಾ.ಸುನೀಲ್ ಗೌಡ, ಮಂಜುಳಾ ಸುರೇಶ್, ಹನುಮಯ್ಯ, ಬಿ.ಕೇಶವಮೂರ್ತಿ, ಎಸ್.ಕೃಷ್ಣಮೂರ್ತಿ, ಹೆಚ್.ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.