ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ ನ.9ರಿಂದ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:42 IST
Last Updated 10 ಅಕ್ಟೋಬರ್ 2019, 19:42 IST
ಬೆಂಗಳೂರು ಸಾಹಿತ್ಯ ಉತ್ಸವ
ಬೆಂಗಳೂರು ಸಾಹಿತ್ಯ ಉತ್ಸವ   

ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 8ನೇ ಆವೃತ್ತಿಯನ್ನು ನ.9 ಮತ್ತು 10ಕ್ಕೆ ಕುಮಾರಕೃಪಾ ರಸ್ತೆಯ ಲಲಿತ್ ಅಶೋಕ್‌ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದೆ.

‘ವಿಶ್ವದ ಸುಮಾರು 200ಕ್ಕೂ ಹೆಚ್ಚು ಪ್ರಮುಖ ಲೇಖಕರು ಮತ್ತು ಭಾಷಣಕಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ ಮತ್ತು ಸಂವಾದವೂ ನಡೆಯಲಿದೆ. ಪುಸ್ತಕ ಓದುವಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದು ಸಂಘಟಕರು ತಿಳಿಸಿದ್ದಾರೆ.

‘ಎರಡು ದಿನಗಳ ಉತ್ಸವದಲ್ಲಿ 150ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ. ಏಕಕಾಲದಲ್ಲಿ 6 ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ವಿವಿಧ ವಿಷಯಗಳ ಮೇಲೆ ಆಯೋಜಿಸಲಾಗುತ್ತದೆ.‌ ವಿವಿಧ ಭಾಷೆಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ’ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.ಈಗಾಗಾಲೇ ಉತ್ಸವಕ್ಕೆ ನೋಂದಣಿ ಆರಂಭವಾಗಿದೆ.

ADVERTISEMENT

ಮಾಹಿತಿಗೆ: www.bangaloreliteraturefestival.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.