ADVERTISEMENT

ಗಾನಸಿದ್ಧ ಗಂಗಾ ಕಲ್ಚರಲ್ ಟ್ರಸ್ಟ್‌ನ ಲಾಂಛನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 0:12 IST
Last Updated 15 ಆಗಸ್ಟ್ 2025, 0:12 IST
ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗಾನಸಿದ್ಧ ಗಂಗಾ ಕಲ್ಚರಲ್ ಟ್ರಸ್ಟ್‌ನ ಲಾಂಛನ (ಲೋಗೊ) ಬಿಡುಗಡೆ ಮಾಡಲಾಯಿತು.
ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗಾನಸಿದ್ಧ ಗಂಗಾ ಕಲ್ಚರಲ್ ಟ್ರಸ್ಟ್‌ನ ಲಾಂಛನ (ಲೋಗೊ) ಬಿಡುಗಡೆ ಮಾಡಲಾಯಿತು.   

ಬೆಂಗಳೂರು: ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಸುಜ್ಞಾನೇಂದ್ರ ತೀರ್ಥರ ಆರಾಧನೆಯ ದಿನ ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗಾನಸಿದ್ಧ ಗಂಗಾ ಕಲ್ಚರಲ್ ಟ್ರಸ್ಟ್‌ನ ಲಾಂಛನ ಬಿಡುಗಡೆ ಮಾಡಲಾಯಿತು.

ಜನಪದ ಹಾಡುಗಾರ ಜೋಗಿಲ ಸಿದ್ದರಾಜು ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ‘ಟ್ರಸ್ಟ್‌ನಿಂದ ಉತ್ತಮ ಕಾರ್ಯಗಳು ನಡೆಯಲಿ. ಅವು  ಸಮಾಜಕ್ಕೆ ಒಳಿತನ್ನು ಉಂಟು ಮಾಡಲಿ’ ಎಂದು ಹಾರೈಸಿದರು.

ಗಾನ ಸಿದ್ದಗಂಗಾ ಕಲ್ಚರಲ್ ಟ್ರಸ್ಟ್‌ ಅಧ್ಯಕ್ಷೆ ಗೀತಾ ಭತ್ತದ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಎಚ್.ಎಸ್. ಸುಧೀಂದ್ರ ಕುಮಾರ್, ಸ್ಥಳೀಯ ಮುಖಂಡರಾದ ವಿ.ವಿ. ಸತ್ಯನಾರಾಯಣ, ಮಲ್ಲಿಕಾರ್ಜುನ ಮಹಾಮನೆ, ಪ್ರಶಾಂತ್ ರಮ್ಯ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.