ADVERTISEMENT

ಕೆ.ಸಿ.ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:53 IST
Last Updated 14 ಫೆಬ್ರುವರಿ 2020, 19:53 IST

ಬೆಂಗಳೂರು: ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಭೇಟಿ ನೀಡಿದರು.

ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಸೈದುಲು ಅಡಾವತ್ ನೇತೃತ್ವದಲ್ಲಿ 8 ಡಿವೈಎಸ್ಪಿಗಳು ಹಾಗೂ 15 ಇನ್‌ಸ್ಪೆಕ್ಟರ್‌ಗಳು ಆಸ್ಪತ್ರೆಯ ಕಾರ್ಯ ವೈಖರಿ ಪರಿಶೀಲನೆ ಮಾಡಿದರು.

ರೋಗಿಗಳ ಅಹವಾಲು ಆಲಿಸಿದರು. ದೂರುಗಳನ್ನೂ ಪಡೆದುಕೊಂಡರು. ಆಸ್ಪತ್ರೆಯ ಕೆಲ ಅವ್ಯವಸ್ಥೆಗಳನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.