ADVERTISEMENT

ಮೆಟ್ರೊ ಸಂಚಾರ ಪುನರಾರಂಭ

ಎಂ.ಜಿ. ರಸ್ತೆ – ಬೈಯಪ್ಪನಹಳ್ಳಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:29 IST
Last Updated 4 ಆಗಸ್ಟ್ 2019, 19:29 IST
ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ 11.20ರವರೆಗೆ ಮೆಟ್ರೊ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯು ಬಸ್‌ ಸೌಲಭ್ಯ ಒದಗಿಸಿತ್ತು –ಪ್ರಜಾವಾಣಿ ಚಿತ್ರ
ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ 11.20ರವರೆಗೆ ಮೆಟ್ರೊ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯು ಬಸ್‌ ಸೌಲಭ್ಯ ಒದಗಿಸಿತ್ತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆನಿರ್ವಹಣಾ ಕಾರ್ಯ ನಿಮಿತ್ತ ಶನಿವಾರ ರಾತ್ರಿ 9.30ರಿಂದ ಬೆಳಿಗ್ಗೆ 11ರವರೆಗೆ ಸ್ಥಗಿತಗೊಂಡಿದ್ದ ಮೆಟ್ರೊ ರೈಲು ಸಂಚಾರ, ಭಾನುವಾರ 11.25ರ ನಂತರ ಪುನರಾರಂಭಗೊಂಡಿತು.

ನಿಯಮಿತ ನಿರ್ವಹಣಾ ಕಾರ್ಯದ ಜೊತೆಗೆ, ಇಂದಿರಾ ನಗರ ಮೆಟ್ರೊ ನಿಲ್ದಾಣದಲ್ಲಿ ಹದಗೆಟ್ಟಿದ್ದ ಬೇರಿಂಗ್‌ ಕೂಡ ದುರಸ್ತಿ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ತಿಳಿಸಿದರು.

‘ಶನಿವಾರ ರಾತ್ರಿಯಿಡೀ ಸಿಬ್ಬಂದಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿದ್ದರು. ಭಾನುವಾರ ಬೆಳಿಗ್ಗೆಯೇ ಕೆಲಸ ಮುಕ್ತಾಯವಾಗಿತ್ತು. ಪರೀಕ್ಷಾರ್ಥವಾಗಿ ರೈಲು ಸಂಚಾರ ನಡೆಸಿದ ಮೇಲೆ, 11.25ಕ್ಕೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.