ADVERTISEMENT

ನೆಲಮಂಗಲ ತಾಲ್ಲೂಕಿಗೆ ಮಾಗಡಿಯ 68 ಗ್ರಾಮಗಳು ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗ
ಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸಿ, ಕಂದಾಯ  ಇಲಾಖೆ ಆದೇಶ ಹೊರಡಿಸಿದೆ.

68 ಗ್ರಾಮಗಳನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಸೆಪ್ಟೆಂಬರ್‌ 9ರಂದು ಕರಡು ಅಧಿಸೂಚನೆ ಹೊರ
ಡಿಸಿ, ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅವುಗಳನ್ನು ಪರಿಗಣಿಸಿ, ಅ.27ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ಸೇರ್ಪಡೆಯಾದ ಗ್ರಾಮಗಳು:

ADVERTISEMENT

ಸೋಲೂರು, ಕಲ್ಯಾಣಪುರ, ತೂಬರಪಾಳ್ಯ, ಎಣ್ಣಿಗೆರೆ, ಚಿಕ್ಕನಹಳ್ಳಿ, ವಡ್ಡರಹಳ್ಳಿ, ಗಂಗೇನಪುರ, ಕನಕೇನಹಳ್ಳಿ, ಭೈರಾಪುರ, ಮಲ್ಲಿಕಾರ್ಜುನ ಪಾಳ್ಯ, ಲಕ್ಕೇನಹಳ್ಳಿ, ಬೀರವಾರ, ಕೋರಮಂಗಲ, ಕನ್ನಸಂದ್ರ, ಪರ್ವತಪಾಳ್ಯ, ಗುಡೇಮಾರನಹಳ್ಳಿ, ಉಡುಕುಂಟೆ, ಮೈಲನಹಳ್ಳಿ, ಪಾಲನಹಳ್ಳಿ, ಶಾಂತಪುರ, ಕಲ್ಲಹಟ್ಟಿಪಾಳ್ಯ, ಭೈರಸಂದ್ರ, ಮಲ್ಲೂರು, ಭಂಟರ ಕುಪ್ಪೆ, ನಾಗನಹಳ್ಳಿ, ಮುಮ್ಮೇನಹಳ್ಳಿ, ಬೊಮ್ಮನಹಳ್ಳಿ, ತೊರೆಚನ್ನೋಹಳ್ಳಿ, ವೋಟಗೊಂಡನಹಳ್ಳಿ, ಗೊಲ್ಲಹಳ್ಳಿ, ಕೊತ್ತಗೊಂಡನಹಳ್ಳಿ, ಮರೇನಹಳ್ಳಿ, ಗರ್ಗೇಶ್ವರಪುರ, ಕೋಡಿಹಳ್ಳಿ, ಪೆಮ್ಮನಹಳ್ಳಿ, ಹಕ್ಕಿನಾಳು,  ಮರಿಕುಪ್ಪೆ, ಬಸವನೇನಹಳ್ಳಿ, ಹೊಸಹಳ್ಳಿ, ಬಾಣವಾಡಿ, ಹಾಲೂರು, ಶಿರಗನಹಳ್ಳಿ, ಮಲ್ಲಾಪುರ, ಮೂಗನಹಳ್ಳಿ,  ಬಿಟ್ಟಸಂದ್ರ, ಹೇಮಾಪುರ, ರಂಗೇನಹಳ್ಳಿ, ಕೆಂಪಾಪುರ, ತಟ್ಟೇಕೆರೆ, ಲಿಂಗೇನಹಳ್ಳಿ, ತಿಮ್ಮಸಂದ್ರ, ರಾಮನಹಳ್ಳಿ, ಗೊರೂರು, ರಂಗನಬೆಟ್ಟ, ಮುಪ್ಪೇನಹಳ್ಳಿ, ಚನ್ನೋಹಳ್ಳಿ, ಅರಿಶಿನ ಕುಂಟೆ, ಊದ್ದಂಡಳ್ಳಿ, ಚಿಕ್ಕಸೋಲೂರು, ಹ್ಯಾಗನಹಳ್ಳಿ, ಬ್ಯಾಡರಹಳ್ಳಿ, ಕೂಡ್ಲುರು, ಸೋಮೇದೇವನಹಳ್ಳಿ, ಒಂಭತ್ತನಕುಂಟೆ, ಕುಪ್ಪೇಮಾಳ, ತಿರುಮಲಾಪುರ, ಹೊಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.