ADVERTISEMENT

‘ಗಾಂಧಿ ತತ್ವಾದರ್ಶ ಮರೆಯಬಾರದು’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:58 IST
Last Updated 1 ಏಪ್ರಿಲ್ 2019, 19:58 IST

ಯಲಹಂಕ: ‘ಮಹಾತ್ಮ ಗಾಂಧೀಜಿ ತತ್ವಾದರ್ಶಗಳನ್ನು ನಮ್ಮ ದೇಶದಲ್ಲಿ ಮರೆಯುತ್ತಿರುವುದು ವಿಷಾದನೀಯ’ ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಪಿ.ವೂಡೇ ಕೃಷ್ಣ ಬೇಸರಿಸಿದರು.

ಗಾಂಧಿ ಸ್ಮಾರಕ ನಿಧಿಯಿಂದ ಆಯೋಜಿಸಿದ್ದ ‘ಗಾಂಧಿ ತತ್ವಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಚೀನಾದಲ್ಲಿ ಶಿಶುವಿಹಾರ ಕಲಿಕೆಯಿಂದ ಸ್ನಾತಕೋತ್ತರ ಪದವಿಯ ಶಿಕ್ಷಣದ ವರೆಗಿನ ಪಾಠಗಳಲ್ಲಿ ಗಾಂಧೀಜಿ ವಿಚಾರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೇವೆಗಾಗಿ ಜೀವನವನ್ನೆ ಮುಡಿಪಾಗಿ ಇರಿಸಿದ ಅವರನ್ನು ದೇಶದ ಜನರು ಮರೆಯಬಾರದು’ ಎಂದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಕುಲಸಚಿವ ವಿ.ಸುರೇಶ್‌ ನಾಡಗೌಡರ್‌,‘ಗಾಂಧೀಜಿ ತತ್ವ, ಸಿದ್ಧಾಂತ ಹಾಗೂ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತ. ಅವರ ಸತ್ಯ, ಅಹಿಂಸೆ, ಸರಳ ಜೀವನ, ಗ್ರಾಮ ಸ್ವರಾಜ್ಯದ ಕನಸಿನ ತತ್ವಾದರ್ಶಗಳು ವಿಶ್ವಕ್ಕೆ ಪರಿಚಿತವಾಗಿವೆ. ಇವುಗಳನ್ನು ಅಳವಡಿಸಿಕೊಂಡರೆ ಮೌಲ್ಯಾಧಾರಿತ ಜೀವನ ನಡೆಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.