ಯಲಹಂಕದಲ್ಲಿ ಮಹೇಶ್ವರಮ್ಮನವರ ಹೂವಿನ ಕರಗ ಮಹೋತ್ಸವ
ಯಲಹಂಕ: ಇಲ್ಲಿನ ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮನವರ ಹೂವಿನ ಕರಗ ಮಹೋತ್ಸವಕ್ಕೆ ಭಾನುವಾರ ಚಾಲನೆ ದೊರೆತಿದೆ.
ಭಾನುವಾರ ಹಸಿಕರಗ ನೆರವೇರಿಸಲಾಯಿತು.
ಮಂಗಳವಾರ ರಾತ್ರಿ 10 ಗಂಟೆಗೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಆರತಿ ದೀಪಗಳ ಸಮೇತ ಮಹೇಶ್ವರಮ್ಮನವರ ದೇವಾಲಯಕ್ಕೆ ಆಗಮಿಸಿ, ದೇವಿಗೆ ಆರತಿ ಬೆಳಗಿದ ನಂತರ ಅಗ್ನಿಕುಂಡ ತುಳಿಯುವ ಕಾರ್ಯ ನೆರವೇರಲಿದೆ. ಬುಧವಾರ ಮಧ್ಯರಾತ್ರಿ ಮಹೇಶ್ವರಮ್ಮನವರ ಕರಗ ಮಹೋತ್ಸವ ಹಾಗೂ ಸುತ್ತಮುತ್ತಲ ಗ್ರಾಮಗಳ 24 ದೇವರುಗಳ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಮು.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.