ADVERTISEMENT

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಯುವಕ–ಯುವತಿಯ ಅಸಭ್ಯ ವರ್ತನೆ: ಹಲವರ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2025, 11:14 IST
Last Updated 11 ಏಪ್ರಿಲ್ 2025, 11:14 IST
   

ಬೆಂಗಳೂರು: ನಮ್ಮ ಮೆಟ್ರೊದ ಅತ್ಯಂತ ಗಿಜಿಗಿಡುವ ನಿಲ್ದಾಣವಾದ ‘ನಾಡಪ್ರಭು ಕೆಂಪೇಗೌಡ ನಿಲ್ದಾಣ–ಮೆಜೆಸ್ಟಿಕ್‌’ನಲ್ಲಿ ಪ್ರೇಮಿಗಳಿಬ್ಬರ ಪ್ರಣಯ ಪ್ರಸಂಗವು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿರುವುದು ಮಾತ್ರವಲ್ಲ, ಬದಲಿಗೆ ದೆಹಲಿ ಮೆಟ್ರೊ ಆಯಿತೇ ಬೆಂಗಳೂರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾದಾವರದ ಕಡೆ ಹೋಗುವ ಮೆಜೆಸ್ಟಿಕ್‌ನ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ಇಂಥದ್ದೊಂದು ಸನ್ನಿವೇಶ ನಡೆದಿದೆ. ಅದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

‘ಬೆಂಗಳೂರಿನ ವಿಷಯದಲ್ಲಿ ಇದು ನಿಜಕ್ಕೂ ಅತ್ಯಂತ ನಿರಾಶಾದಾಯಕ ಘಟನೆ. ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಲಜ್ಜೆಗೆಟ್ಟ ವರ್ತನೆ ಪ್ರತಿಯೊಬ್ಬರನ್ನೂ ಮುಜುಗರಕ್ಕೀಡು ಮಾಡಿದೆ. ಯುವಕನೊಬ್ಬ ರೈಲಿಗಾಗಿ ಕಾಯುತ್ತಾ ನಿಂತ ಸರತಿ ಸಾಲಿನಲ್ಲೇ ಯುವತಿಯ ಮೇಲಂಗಿ ಒಳಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಮೆಟ್ರೊ ನಿಲ್ದಾಣದಂತ ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಅಸಭ್ಯತನವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ನೆಟ್ಟಿಗರೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

‘ಸಾರ್ವಜನಿಕ ಸ್ಥಳವೆಂದರೆ ಅಲ್ಲಿ ಮಕ್ಕಳು, ಮಹಿಳೆಯರು, ಕುಟುಂಬವರ್ಗ, ಹಿರಿಯರು ಇರುತ್ತಾರೆ. ಆದರೆ ಈ ಇಬ್ಬರು ಇದೇನೋ ತಮ್ಮ ಖಾಸಗಿ ಸ್ಥಳ ಎಂಬಂತೆ ಅಸಭ್ಯವಾಗಿ ವರ್ತಿಸಿದ್ದು ಅಗೌರವವೂ ಹೌದು, ಅವಮಾನಕರ ಕೂಡಾ. ಇದು ಇವರ ಸಾರ್ವಜನಿಕ ನಡವಳಿಕೆಯ ಕೊರತೆಯ ಜತೆಗೆ, ಸುತ್ತಮುತ್ತಲಿನ ಜನರ ಬಗ್ಗೆ ಯಾವುದೇ ಗೌರವದ ಜತೆಗೆ, ನಾಚಿಕೆಯೂ ಇಲ್ಲದ ವರ್ತನೆಯನ್ನು ತೋರಿಸುತ್ತದೆ’ ಎಂದಿದ್ದಾರೆ.

‘ಸಂಬಂಧ ಎನ್ನುವುದು ಅವರವರ ವೈಯಕ್ತಿಕ ವಿಷಯ. ಸಾರ್ವಜನಿಕ ಸ್ಥಗಳಲ್ಲಿ ಸಭ್ಯತೆ ಎನ್ನುವುದು ಎಲ್ಲೆ ಮೀರಬಾರದು. ಈ ಘಟನೆಯಲ್ಲಿ ಯುವಕನ ಪಾತ್ರದ ಜತೆಗೆ, ಇಂಥ ಅಸಭ್ಯತನಕ್ಕೆ ಸಹಕಾರ ನೀಡಿದ ಯುವತಿಯದ್ದೂ ಅಷ್ಟೇ ತಪ್ಪಿದೆ. ಇದು ಖಂಡಿತವಾಗಿ ಸ್ವಾತಂತ್ರವೂ ಅಲ್ಲ, ದಿಟ್ಟತನವೂ ಅಲ್ಲ. ಇದು ಸಮಾಜದ ಕುರಿತು ಇವರಿಗಿರುವ ಅಗೌರವವಷ್ಟೇ. ಜತೆಗೆ ಸಂಸ್ಕೃತಿ ಮತ್ತು ಸಾಮಾಜಿಕ ಜಾಗೃತಿಯ ಕೊರತೆ’ ಎಂದಿದ್ದಾರೆ.

‘ದುರುದೃಷ್ಟಕರವೆಂದರೆ ಇಂಥ ಘಟನೆಗಳು ಆಗಾಗ್ಗ ಮಹಾನಗರದಲ್ಲಿ ಸಂಭವಿಸುತ್ತಲೇ ಇವೆ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು. ಅದರಲ್ಲೂ ಸಾರ್ವಜನಿಕ ಸ್ಥಳವನ್ನು ಶುಚಿಯಾಗಿ, ಸುರಕ್ಷತಿವಾಗಿ ಮತ್ತು ಪ್ರತಿಯೊಬ್ಬರೂ ಮುಜುಗರಪಟ್ಟುಕೊಳ್ಳದಂತಿರಬೇಕು’ ಎಂದು ಒತ್ತಾಯಿಸಿದ್ದಾರೆ.

ಆದರೆ ಈ ವಿಡಿಯೊ ಹಂಚಿಕೊಂಡವರು, ಇದರಲ್ಲಿ ಕಂಡುಬರುವ ಯುವಕ, ಯುವತಿಯ ಗುರುತು ಮರೆಮಾಚಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.