ADVERTISEMENT

ಬಸವೇಶ್ವರಸ್ವಾಮಿ ಜಾತ್ರೆ: ಸಂಕ್ರಾಂತಿ ಸಂತೆ ಇಂದು

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 3:54 IST
Last Updated 15 ಜನವರಿ 2020, 3:54 IST
ಸೋಂಪುರದಲ್ಲಿ ನಡೆಯಲಿರುವ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಉಚಿತವಾಗಿ ಕಡಲೆಕಾಯಿಯನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಸವೇಶ್ವರ ಭಕ್ತ ಮಂಡಳಿಯ ಕಾರ್ಯಕರ್ತರು
ಸೋಂಪುರದಲ್ಲಿ ನಡೆಯಲಿರುವ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಉಚಿತವಾಗಿ ಕಡಲೆಕಾಯಿಯನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಸವೇಶ್ವರ ಭಕ್ತ ಮಂಡಳಿಯ ಕಾರ್ಯಕರ್ತರು   

ರಾಜರಾಜೇಶ್ವರಿನಗರ: ನಗರದ ಐತಿಹಾಸಿಕ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ನಡೆಯಲಿದೆ. ಜಾತ್ರೆಯ ಅಂಗವಾಗಿಸಂಕ್ರಾಂತಿ ಸಂತೆ, ಗಿರಿಜಾ ಕಲ್ಯಾಣೋತ್ಸವ, ಉಚಿತ ಕಡಲೆಕಾಯಿ ಪರಿಷೆಯನ್ನೂ ಹಮ್ಮಿಕೊಳ್ಳಲಾಗಿದೆ.ಸೋಂಪುರ, ಚನ್ನವೀರಯ್ಯನಪಾಳ್ಯ, ವರಾಹಸಂದ್ರದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಬಸವೇಶ್ವರ ಭಕ್ತಮಂಡಳಿಯ ಅಧ್ಯಕ್ಷ ಎಂ.ರುದ್ರೇಶ್, ‘ಧಾರ್ಮಿಕ ಪರಂಪರೆ, ಇತಿಹಾಸ, ಗ್ರಾಮೀಣ ಸೊಗಡಿನ ಹಬ್ಬ ಹರಿದಿನಗಳನ್ನು ನಮ್ಮ ಯುವ ಜನಾಂಗ ಮರೆಯಬಾರದು ಎಂಬ ಉದ್ದೇಶದಿಂದ ಈ
ಜಾತ್ರಾ ಮಹೋತ್ಸವವನ್ನು ತಪ್ಪದೇ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ಕಡಲೆಕಾಯಿ ಪರಿಷೆಯಲ್ಲಿ ಕನಿಷ್ಠ 50 ರಿಂದ 70 ಸಾವಿರ ಜನರಿಗೆ ಎರಡು ಸೇರು ಕಡಲೆಕಾಯಿ , ಕಬ್ಬು, ಗೆಣಸನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಈ ಸಲುವಾಗಿಯೇ ಪಕ್ಕದ ರಾಜ್ಯಗಳಿಂದ ಈಗಾಗಲೇ ಲಾರಿ ಗಟ್ಟಲೆ ಕಡಲೆಕಾಯಿ , ಕಬ್ಬು, ಗೆಣಸನ್ನು ತಂದು ಶೇಖರಿಸಿಡಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.