ADVERTISEMENT

ಕೋರಮಂಗಲದಲ್ಲಿ ಮಲಬಾರ್ ಡೈಮಂಡ್ ಶೋ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:31 IST
Last Updated 27 ಸೆಪ್ಟೆಂಬರ್ 2020, 3:31 IST
ಕೋರಮಂಗಲದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಮಳಿಗೆಯಲ್ಲಿ ಹೊಸ ವಿನ್ಯಾಸದ ವಜ್ರದ ಆಭರಣಗಳನ್ನು ಪ್ರದರ್ಶಿಸಿದ ಯುವತಿಯರು
ಕೋರಮಂಗಲದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಮಳಿಗೆಯಲ್ಲಿ ಹೊಸ ವಿನ್ಯಾಸದ ವಜ್ರದ ಆಭರಣಗಳನ್ನು ಪ್ರದರ್ಶಿಸಿದ ಯುವತಿಯರು   

ಬೆಂಗಳೂರು: ನಗರದ ಕೋರಮಂಗಲದಲ್ಲಿ ನವೀಕರಿಸಿದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ ಮಳಿಗೆ ಶನಿವಾರ ಉದ್ಘಾಟನೆಗೊಂಡಿದೆ. ಇದರ ಅಂಗವಾಗಿ ಅಕ್ಟೋಬರ್ 4ರವರೆಗೆ ವಿಶೇಷ ‘ಡೈಮಂಡ್ ಶೋ’ ಆಯೋಜಿಸಲಾಗಿದೆ.

ಸೊಗಸಾದ ವಿನ್ಯಾಸದ ವಜ್ರದ ಆಭರಣಗಳು ಪ್ರದರ್ಶನಗೊಳ್ಳುತ್ತಿದ್ದು, ಅವುಗಳ ತಯಾರಿಕೆ ಮೇಲಿನ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ಮತ್ತು ವಜ್ರದ ಮೌಲ್ಯದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಮಲಬಾರ್ ಗೋಲ್ಡ್ ಸಮೂಹ ತಿಳಿಸಿದೆ.

‘ಬೆಂಗಳೂರಿನಜನರನ್ನು ಗಮನದಲ್ಲಿಟ್ಟುಕೊಂಡು ಕೋರಮಂಗಲದ ಮಳಿಗೆಯನ್ನು ಕಲಾತ್ಮಕವಾಗಿ ಮರುವಿನ್ಯಾಸಗೊಳಿಸಲಾಗಿದೆ. ಇದು ಗ್ರಾಹಕರ ಮೆಚ್ಚುಗೆ ಗಳಿಸಲಿದ್ದು, ಅವರಿಗೆ ವಿಶಿಷ್ಟ ಅನುಭವ ನೀಡಲಿದೆ. ಮಳಿಗೆಗಳ ಸಂಖ್ಯೆ ಮತ್ತು ಆಭರಣ ಮಾರಾಟದಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನ ಪಡೆಯುವ ಗುರಿ ನಮ್ಮದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮಳಿಗೆಗಳ ಸಂಖ್ಯೆಯನ್ನು ಮೂರುಪಟ್ಟು ಹೆಚ್ಚಿಸುವ ಯೋಜನೆ ಇದೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮ್ಮದ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.