ADVERTISEMENT

ಬಿಪಿಎಲ್‌: ಸಾವಿರ ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:53 IST
Last Updated 1 ಜುಲೈ 2021, 21:53 IST
ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ಆಯೋಜಿಸಿದ ಲಸಿಕೆ ವಿತರಣಾ ಅಭಿಯಾನದಲ್ಲಿ ಬಿಪಿಎಲ್ ಕುಟುಂಬದ ಸದಸ್ಯರು ಲಸಿಕೆ ಪಡೆದುಕೊಂಡರು.
ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ಆಯೋಜಿಸಿದ ಲಸಿಕೆ ವಿತರಣಾ ಅಭಿಯಾನದಲ್ಲಿ ಬಿಪಿಎಲ್ ಕುಟುಂಬದ ಸದಸ್ಯರು ಲಸಿಕೆ ಪಡೆದುಕೊಂಡರು.   

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (ಬಿಪಿಎಲ್) ಸಾವಿರ ಮಂದಿಗೆನಗರದಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸಿದೆ.

ಈ ಕಾರ್ಯಕ್ಕೆ ನಾರಾಯಣ ಹೃದಯಾಲಯ, ಸರ್ಕಾರೇತರ ಸಂಸ್ಥೆ ಯಾದ ಥನಲ್, ಕರ್ನಾಟಕ ಬೆಂಗಾಲಿ ಸ್ವರ್ಣ ಶಿಲ್ಪಿ ಅಸೋಸಿಯೇಷನ್ ಹಾಗೂ ವಿಶ್ವಕರ್ಮಾ ಸೇವಾ ಸಮಿತಿ ಸಹಕಾರ ನೀಡಿವೆ.

‘ಕೋವಿಡ್ ಮೂರನೇ ಅಲೆ ಯನ್ನು ಎದುರಿಸಬೇಕಾದರೆ ದೇಶದ ಜನತೆ ಲಸಿಕೆ ಪಡೆದುಕೊಳ್ಳಬೇಕು. ರೋಗನಿರೋಧಕ ಶಕ್ತಿ ವೃದ್ಧಿಗೆ ಲಸಿಕೆ ಸಹಕಾರಿ. ಹಾಗಾಗಿ, ದುರ್ಬಲ ವರ್ಗದವರಿಗೆ ಲಸಿಕೆ ಪಡೆಯಲು ನೆರವಾಗುತ್ತಿದ್ದೇವೆ. ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.