ADVERTISEMENT

ಮೆಟ್ರೊ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:03 IST
Last Updated 5 ಅಕ್ಟೋಬರ್ 2025, 2:03 IST
<div class="paragraphs"><p>ಮೆಟ್ರೊ</p></div>

ಮೆಟ್ರೊ

   

ಪ‍್ರಜಾವಾಣಿ ಚಿತ್ರ

ಬೆಂಗಳೂರು: ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಮೆಟ್ರೊ ರೈಲು ಬರುವ ವೇಳೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ADVERTISEMENT

ಹಸಿರು ಮಾರ್ಗದಲ್ಲಿ ಮಧ್ಯಾಹ್ನ 3.17ಕ್ಕೆ ಮಾದಾವರದಿಂದ ರೇಷ್ಮೆ ಸಂಸ್ಥೆಯ ಕಡೆಗೆ ರೈಲು ಸಾಗುತ್ತಿದ್ದ ವೇಳೆ 3ನೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಸುಮಾರು 35 ವರ್ಷದ ಪ್ರಯಾಣಿಕರೊಬ್ಬರು ಹಾರಿದ್ದಾರೆ. ಸ್ಟೇಷನ್‌ ಕಂಟ್ರೋಲರ್‌ಗಳಾದ ಗಣೇಶ, ವೆಂಕಟೇಶ್‌ ಮತ್ತು ಸಿಬ್ಬಂದಿ ಕೂಡಲೇ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಿದ್ದಾರೆ. ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಪ್ರಯಾಣಿಕರ ಸಹಾಯದಿಂದ ಹೊರತೆಗೆದು ಆಂಬುಲೆನ್ಸ್‌ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು.

ವಿಧಾನಸೌಧದಲ್ಲಿ ‘ಡಿ’ಗ್ರೂಪ್‌ ನೌಕರರಾಗಿರುವ ವೀರೇಶ್‌ ಆತ್ಮಹತ್ಯೆಗೆ ಯತ್ನಿಸಿದವರು ಎಂದು ಗುರುತಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ನ್ಯಾಷನಲ್‌ ಕಾಲೇಜು– ರಾಜಾಜಿನಗರ ನಡುವೆ ಸಂಚಾರ ಮಧ್ಯಾಹ್ನ 3.47ರವರೆಗೆ ಸ್ಥಗಿತಗೊಂಡಿತು. ನ್ಯಾಷನಲ್‌ ಕಾಲೇಜಿನಿಂದ ರೇಷ್ಮೆ ಸಂಸ್ಥೆಯವರೆಗೆ ಹಾಗೂ ರಾಜಾಜಿನಗರದಿಂದ ಮಾದಾವರವರೆಗೆ ಸಂಚಾರ ಎಂದಿನಂತಿತ್ತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.