ಬೆಂಗಳೂರು: ಹೊಸ ವರ್ಷ ಯುಗಾದಿ ಹಬ್ಬಕ್ಕಾಗಿ ಬೇವಿನ ಸೊಪ್ಪು ಕೀಳಲು ಹೋಗಿದ್ದ ಮರದಿಂದ ಕಾಲು ಜಾರಿ ಬಿದ್ದು ಕುಬೇರ್ ಎಂಬುವರು ಮೃತಪಟ್ಟಿದ್ದಾರೆ.ಮೃತ ಕುಬೇರ್ ಕೆ.ಪಿ.ಅಗ್ರಹಾರ ನಿವಾಸಿ. ಕುಬೇರ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮಾರುಕಟ್ಟೆಗಳು ಬಂದ್ ಆಗಿವೆ. ಹೀಗಾಗಿ ಕುಬೇರ್ ಬೇವು ತರಲು ಹೋಗಿದ್ದರು.
ಎಲ್ಲಿಯೂ ಬೇವು ಸಿಕ್ಕಿರಲಿಲ್ಲ. ಯುಗಾದಿ ಹಬ್ಬದ ದಿನ ಹಿರಿಯರಿಗೆ ಬೇವು-ಬೆಲ್ಲ ನೈವೇದ್ಯ ಮಾಡಬೇಕಿತ್ತು. ಹೀಗಾಗಿ ಮರವೊಂದನ್ನು ಏರಿ ಬೇವು ಕೀಳಲು ಮುಂದಾಗಿದ್ದರು.
ಅದೇ ವೇಳೆಯೇ ಕಾಲು ಜಾರಿ ಬಿದ್ದಿದ್ದರು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟರು.ಮೃತದೇಹವನ್ನು ವಿಕ್ಟೋರಿಯಾದಲ್ಲಿ ಇಡಲಾಗಿದ್ದು, ಕೆ.ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.