ADVERTISEMENT

ಇಂದಿನಿಂದ ಮಾವು – ಹಲಸು ಮೇಳ

ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ 8ರಿಂದ ಸಂಜೆ 8ರವರೆಗೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಮೇ 2022, 19:26 IST
Last Updated 26 ಮೇ 2022, 19:26 IST
ಮಾವು–ಹಲಸು ಮೇಳ ಕುರಿತ ಪತ್ರಿಕಾಗೋಷ್ಠಿಯಲ್ಲಿ ರೈತ ಭಾಸ್ಕರ ರಾವ್‌, ಹಲಸು ಹಣ್ಣಿನ ತಜ್ಞೆ ಶ್ಯಾಮಲ, ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಲಲಿತಾ ಅವರು ಹಣ್ಣುಗಳನ್ನು ಪ್ರದರ್ಶಿಸಿದರು. – ಪ್ರಜಾವಾಣಿ ಚಿತ್ರ
ಮಾವು–ಹಲಸು ಮೇಳ ಕುರಿತ ಪತ್ರಿಕಾಗೋಷ್ಠಿಯಲ್ಲಿ ರೈತ ಭಾಸ್ಕರ ರಾವ್‌, ಹಲಸು ಹಣ್ಣಿನ ತಜ್ಞೆ ಶ್ಯಾಮಲ, ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಲಲಿತಾ ಅವರು ಹಣ್ಣುಗಳನ್ನು ಪ್ರದರ್ಶಿಸಿದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ನಡೆಯದೇ ಇದ್ದ ಮಾವು–ಹಲಸು ಮೇಳ ಶುಕ್ರವಾರದಿಂದ (ಮೇ 27) ಜೂ.13ರವರೆಗೆ ಲಾಲ್‌ಬಾಗ್‌ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು, ‘ಮಾವು–ಹಲಸು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತರಹೇವಾರಿ ಹಾಗೂ ಆರೋಗ್ಯಯುತ ಹಣ್ಣುಗಳು ಸಿಗಲಿವೆ. ಮಾವು ಬೆಳೆಗಾರರು ಬೆಳೆದ ಫಲವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಆಶಯ ಇದಾಗಿದೆ. ಬಾದಾಮಿ, ಮಲ್ಲಿಕಾ, ರಸಪುರಿ, ಕೇಸರ್, ಬೈಗನಪಲ್ಲಿ, ಮಲಗೋವಾ, ತೋತಾ ಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಸಿಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಂಜೆ 4.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಮುನಿರತ್ನ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್‌ ಬಿ. ಗರುಡಾಚಾರ್, ಅ.ದೇವೇಗೌಡ ಭಾಗವಹಿಸಲಿದ್ದಾರೆ’ ಎಂದರು.

ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ‘ಮೇಳದಲ್ಲಿ ಹಲವಾರು ಬಗೆಯ ಹಲಸಿನ ಹಣ್ಣು ಹಾಗೂ ಹಲಸಿನ ಉತ್ಪನ್ನಗಳು ಖರೀದಿಗೆ ಸಿಗಲಿವೆ.ಹಳದಿ, ಕೇಸರಿ, ಕೆಂಪು ಬಣ್ಣ ಹಾಗೂ ವೈವಿಧ್ಯಮಯ ಹಲಸು ಮತ್ತು ಹಪ್ಪಳ, ಚಿಪ್ಸ್ ಕೂಡ ಮೇಳದ ಆಕರ್ಷಣೆಯಾಗಲಿದೆ’ ಎಂದರು.

ADVERTISEMENT

‌ರೈತರು ಹಾಗೂ ರೈತ ಉತ್ಪಾದಕ ಸಂಘಗಳಿಗೆ 108 ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಲಸು ಬೆಳೆಗಾರರಿಗೆ 16 ಹಾಗೂ ಉಪ ಉತ್ಪನ್ನಗಳ ಮಾರಾಟಗಾರರಿಗೆ 8 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.