ADVERTISEMENT

90 ವರ್ಷದ ರೋಗಿಗೆ ‘ಕಾರ್ಡಿಯಾಕ್‌ ಅಕ್ಲೂಡರ್’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:15 IST
Last Updated 26 ಸೆಪ್ಟೆಂಬರ್ 2019, 20:15 IST
ಡಾ. ರಂಜನ್‌ ಶೆಟ್ಟಿ ಅವರು ‘ಕಾರ್ಡಿಯಾಕ್ ಅಕ್ಲೂಡರ್’ ಸಾಧನ ಪ್ರದರ್ಶಿಸಿದರು. ಆಸ್ಪತ್ರೆಯ ಹೃದಯ ಔಷಧ ವಿಭಾಗದ ಸಲಹೆಗಾರ್ತಿ ಡಾ. ಅನನ್ಯಾ ದಾಸ್, ಡಾ. ಅನೂಪ್ ಅಮರನಾಥ್ ಇದ್ದರು.
ಡಾ. ರಂಜನ್‌ ಶೆಟ್ಟಿ ಅವರು ‘ಕಾರ್ಡಿಯಾಕ್ ಅಕ್ಲೂಡರ್’ ಸಾಧನ ಪ್ರದರ್ಶಿಸಿದರು. ಆಸ್ಪತ್ರೆಯ ಹೃದಯ ಔಷಧ ವಿಭಾಗದ ಸಲಹೆಗಾರ್ತಿ ಡಾ. ಅನನ್ಯಾ ದಾಸ್, ಡಾ. ಅನೂಪ್ ಅಮರನಾಥ್ ಇದ್ದರು.   

ಬೆಂಗಳೂರು: ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ 90 ವರ್ಷದ ವ್ಯಕ್ತಿಗೆ ಮಣಿಪಾಲ್ ಆಸ್ಪತ್ರೆ ವೈದ್ಯರು ‘ಕಾರ್ಡಿಯಾಕ್ ಅಕ್ಲೂಡರ್’ ಸಾಧನವನ್ನು ಅಳವಡಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಂಜನ್‌ ಶೆಟ್ಟಿ
ಮಾತನಾಡಿ, ‘ವ್ಯಕ್ತಿ ಪಾರ್ಶ್ವವಾಯು ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತ ತಿಳಿಗೊಳಿಸಲು ಔಷಧ ನೀಡಿದ
ಪರಿಣಾಮ ಸಂಕೀರ್ಣ ಸಮಸ್ಯೆ ಕಾಣಿಸಿಕೊಂಡು, ಮೂತ್ರದಲ್ಲಿ ರಕ್ತಸ್ರಾವ ಉಂಟಾಯಿತು. ಅಂತಿಮವಾಗಿ ಹೃದಯದ ಎಡ ಹೃತ್ಕರ್ಣಕ್ಕೆ‘ಕಾರ್ಡಿಯಾಕ್ ಅಕ್ಲೂಡರ್’ ಸಾಧನ ಅಳವಡಿಸುವ ಮೂಲಕ ರಕ್ತಸ್ರಾವವನ್ನು ತಡೆಯಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT