ADVERTISEMENT

ಮಣಿಪಾಲ್‌ ಆಸ್ಪತ್ರೆ ಒಪಿಡಿ 2 ಗಂಟೆ ಬಂದ್!‌

ಹಾಸಿಗೆ ಮೀಸಲಿಡದ ಆಸ್ಪತ್ರೆ ವಿರುದ್ಧ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:55 IST
Last Updated 23 ಏಪ್ರಿಲ್ 2021, 20:55 IST
ವೈಟ್‌ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ
ವೈಟ್‌ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ   

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ಶೇ 50ರಷ್ಟು ಹಾಸಿಗೆ ನೀಡದ ಆಸ್ಪತ್ರೆಗಳ‌ ವಿರುದ್ಧ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿದರು.

ಬ್ರೂಕ್ ಫೀಲ್ಡ್ ಆಸ್ಪತ್ರೆ, ಜೀವಿಕಾ ಆಸ್ಪತ್ರೆ, ಕೊಶೈ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ (ವೈಟ್ ಫೀಲ್ಡ್), ನಾರ್ತ್ ಸೈಡ್ ಆಸ್ಪತ್ರೆ, ಸಾಯಿ ಆಸ್ಪತ್ರೆಗಳಿಗೆ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಾಚಲಪತಿ, ಡಿಸಿಪಿ ದೇವರಾಜ್, ಆರೋಗ್ಯಾಧಿಕಾರಿ ಡಾ. ಸುರೇಂದ್ರ ಮತ್ತು ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ಮಣಿಪಾಲ್ ಆಸ್ಪತ್ರೆಯಲ್ಲಿ 106 ಹಾಸಿಗೆಗಳಿದ್ದು, ಅದರಲ್ಲಿ 42 ಹಾಸಿಗೆಗಳನ್ನಷ್ಟೇ ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿತ್ತು. ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹೊರ ರೋಗಿಗಳ ವಿಭಾಗವನ್ನು 2 ಗಂಟೆ ಬಂದ್ ಮಾಡಲಾಯಿತು. ಬಳಿಕ ಶೇ 50ರಷ್ಟು ಹಾಸಿಗೆಯನ್ನು ಆಸ್ಪತ್ರೆ ಮೀಸಲು ಇಟ್ಟಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.