ADVERTISEMENT

ಮಂತ್ರಿಮಾಲ್‌ನಿಂದ ₹6.50 ಕೋಟಿ ಆಸ್ತಿ ತೆರಿಗೆ ಪಾವತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:57 IST
Last Updated 28 ನವೆಂಬರ್ 2025, 15:57 IST
<strong>ಬೆಂಗಳೂರು ನಗರದ ಮಂತ್ರಿಮಾಲ್‌ ಎದುರು ಸೋಮವಾರ ಕಂಡು ಬಂದ ನೋಟ</strong>
ಬೆಂಗಳೂರು ನಗರದ ಮಂತ್ರಿಮಾಲ್‌ ಎದುರು ಸೋಮವಾರ ಕಂಡು ಬಂದ ನೋಟ   

ಬೆಂಗಳೂರು: ಮಂತ್ರಿ ಮಾಲ್‌ ವತಿಯಿಂದ ₹6.50 ಕೋಟಿ ಆಸ್ತಿ ತೆರಿಗೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಶುಕ್ರವಾರ ಪಾವತಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಚಿಕ್ಕಪೇಟೆಯಲ್ಲಿ ಆಸ್ತಿ ತೆರಿಗೆ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಂತ್ರಿ ಮಾಲ್‌ನವರು, ಬಾಕಿ ಇರುವ ₹30 ಕೋಟಿ ಆಸ್ತಿ ತೆರಿಗೆ ಪೈಕಿ ₹5 ಕೋಟಿಯನ್ನು ಪಾವತಿಸಿದರು. ಸಂಜೆ ₹1.5 ಕೋಟಿ ಮೊತ್ತದ ಚೆಕ್‌ ನೀಡಿದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಸ್ತಿದಾರರ ಪಟ್ಟಿ ಮಾಡಿ ಅವರಿಗೆ ನೋಟಿಸ್‌ ನೀಡಬೇಕು. ಪಾವತಿ ಮಾಡದಿದ್ದಲ್ಲಿ ಕಟ್ಟಡಗಳಿಗೆ ಬೀಗ ಹಾಕಬೇಕು ಎಂದು ರಾಜೇಂದ್ರ ಚೋಳನ್‌ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪಾದಚಾರಿ ಮಾರ್ಗ ತೆರವು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿಯ ಅನಘ ಗ್ರ್ಯಾಂಡ್ ಹೋಟೆಲ್‌ನಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ರಸ್ತೆವರೆಗೆ ಮತ್ತು ಕೋರಮಂಗಲದ ಫೋರಂ ಮಾಲ್‌ನಿಂದ ವಾಟರ್ ಟ್ಯಾಂಕ್‌ವರೆಗೆ ಪಾದಚಾರಿ ಮಾರ್ಗದಲ್ಲಿನ ಒತ್ತುವರಿಯನ್ನು ಶುಕ್ರವಾರ ತೆರವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.