ADVERTISEMENT

ಮತ್ತೂರು ಗೋಪಾಲ್, ನಾಗರಾಜಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:29 IST
Last Updated 20 ಡಿಸೆಂಬರ್ 2019, 19:29 IST
ಮತ್ತೂರು ಗೋಪಾಲ್
ಮತ್ತೂರು ಗೋಪಾಲ್   

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019–20ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಗೌರವ ಪ್ರಶಸ್ತಿಗೆ ಶಿವಮೊಗ್ಗದ ಮತ್ತೂರು ಗೋಪಾಲ್ ಹಾಗೂ ಮೈಸೂರಿನ ಬಿ.ನಾಗರಾಜ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ 16 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹೊಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರುವರಿ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು

ಕರ್ನಾಟಕ ಸಂಗೀತ

1.ಆರ್.ಎಸ್.ನಂದಕುಮಾರ್, ಮೈಸೂರು (ಹಾಡುಗಾರಿಕೆ)

2.ಎಂ.ಟಿ.ರಾಜಕೇಸರಿ, ಬೆಂಗಳೂರು (ಮೃದಂಗ)

3.ಎಂ.ಎ‌ನ್.ಗಣೇಶ್, ಮೇಲುಕೋಟೆ (ನಾದಸ್ವರ)

ಹಿಂದೂಸ್ತಾನಿ ಸಂಗೀತ

1.ಫಕಿರೇಶ ಕಣವಿ, ಕಲಬುರ್ಗಿ (ಗಾಯನ)

2.ಎಸ್.ಬಾಲೇಶ್, ಬೆಳಗಾವಿ (ಶಹನಾಯಿ)

3.ಎಂ.ನಾಗೇಶ್, ಬೆಂಗಳೂರು (ತಬಲಾ)

4.ಶಶಿಕಲಾ ದಾನಿ, ಹುಬ್ಬಳ್ಳಿ (ಜಲತರಂಗ)

ನೃತ್ಯ

1.ಕಮಲಾ ಭಟ್, ಮಂಗಳೂರು (ಭರತನಾಟ್ಯ)

2.ಎ.ಅಶೋಕಕುಮಾರ, ಬೆಂಗಳೂರು (ಭರತನಾಟ್ಯ)

3.ಶುಭಾಂಗಿ, ಕಲಬುರ್ಗಿ (ಭರತನಾಟ್ಯ)

ಸುಗಮ ಸಂಗೀತ

1.ಕೆ.ಎಸ್.ಸುರೇಖಾ, ದಕ್ಷಿಣ ಕನ್ನಡ

2.ಡಾ.ಜ್ಯೋತಿಲಕ್ಷ್ಮಿ ಡಿ.ಪಿ., ಧಾರವಾಡ

ಕಥಾಕೀರ್ತನ

1.ಬಸವಣ್ಣಯ್ಯ ಶಾಸ್ತ್ರಿಗಳು ಬಸವನಕಟ್ಟಿ, ಗದಗ

2.ನರಸಿಂಹದಾಸ್, ತುಮಕೂರು

ಗಮಕ

1.ರಾಮ ಸುಬ್ರಾಯಶೇಟ್, ಚಿಕ್ಕಮಗಳೂರು

ಹೊರನಾಡ ಕಲಾವಿದ

1.ಓಂಕಾರನಾಥ್ ಗುಲ್ವಾಡಿ, ಮುಂಬೈ (ತಬಲಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.