ADVERTISEMENT

ವೈದ್ಯಕೀಯ ಸ್ನಾತಕೋತ್ತರ ಸೀಟು ಖೋತಾ

​ಪ್ರಜಾವಾಣಿ ವಾರ್ತೆ
Published 9 ಮೇ 2019, 19:55 IST
Last Updated 9 ಮೇ 2019, 19:55 IST
   

ಬೆಂಗಳೂರು: ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳು ತಮ್ಮಲ್ಲಿನ ಸ್ನಾತಕೋತ್ತರ ಡಿಪ್ಲೊಮಾ ಸೀಟುಗಳನ್ನು ಸ್ನಾತಕೋತ್ತರ ವೈದ್ಯಕೀಯ ಸೀಟುಗಳಾಗಿ ಬದಲಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅಂತಿಮ ಸೂಚನೆ ನೀಡಿದೆ.

ಸೀಟುಗಳು ಬದಲಾಗದ ಕಾರಣ 2019–20ನೇ ಸಾಲಿನಲ್ಲಿ ರಾಜ್ಯದಲ್ಲಿ ಲಭ್ಯ ಇರುವ ಪಿಜಿ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿ 97 ಸೀಟುಗಳು ಕಡಿಮೆಯಾಗಲಿವೆ.

ಈಚೆಗೆ ನಡೆದ ಎಂಸಿಐ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಆರೋಗ್ಯ ಸಚಿವಾಲಯದ ಗಮನಕ್ಕೆ ಈ ವಿಷಯ ತರಲಾಗಿದೆ.

ADVERTISEMENT

‘ಕೆಲವು ಕಾಲೇಜುಗಳಲ್ಲಿ ಗೊಂದಲಗಳು ಉಳಿದಿದ್ದವು. ಸಿಬ್ಬಂದಿ ಪ್ರಮಾಣ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಈ ಕಾಲೇಜುಗಳು ತಮ್ಮಲ್ಲಿನ ಪಿಜಿ ಡಿಪ್ಲೊಮಾ ಸೀಟುಗಳನ್ನು ಸ್ನಾತಕೋತ್ತರ ಸೀಟುಗಳಾಗಿ ಬದಲಿಸಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ.ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಸೀಟುಗಳ ಸಂಖ್ಯೆ 150 ಹೆಚ್ಚಲಿವೆ. ಆರು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು 30 ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಿವೆ. ಸಿಬ್ಬಂದಿ ಕೊರತೆ ನೀಗಿಸಿದ್ದು,ಎಂಸಿಐ ಪರಿಶೀಲನೆ ಮುಗಿಸುವುದನ್ನು ಕಾಯುತ್ತಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.