ADVERTISEMENT

‘ಮೀಮ್’ ಮೂರನೇ ಆವೃತ್ತಿಯ ಕವಿಗೋಷ್ಠಿ: ಕವಿತೆಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 11:02 IST
Last Updated 15 ಆಗಸ್ಟ್ 2025, 11:02 IST
   

ಬೆಂಗಳೂರು: ‘ಮೀಮ್’ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ.

ಮಹಮ್ಮದ್ ಪೈಗಂಬರ್ ಅವರ ಕುರಿತಾಗಿ ಕವಿತೆ ರಚಿಸಿರಬೇಕು. ಸ್ವರಚಿತ ಹಾಗೂ ಅಪ್ರಕಟಿತವಾಗಿರಬೇಕು. ಆಯ್ದ ಕವಿಗಳಿಗೆ ತಮ್ಮ ಕವಿತೆಗಳನ್ನು ವಾಚಿಸಲು ಮತ್ತು ಖ್ಯಾತ ಲೇಖಕರಿಂದ ನಡೆಯಲಿರುವ ಸಾಹಿತ್ಯ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸೆಪ್ಟೆಂಬರ್ 21ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಸೆಪ್ಟೆಂಬರ್ 1ಕ್ಕಿಂತ ಮೊದಲು ಕವಿತೆಗಳನ್ನು meemkannada@gmail.com ಗೆ ಕಳುಹಿಸಲು ಸಂಘಟಕರು ಕೋರಿದ್ದಾರೆ.

ಕೋಯಿಕ್ಕೋಡ್‌ನ ಮರ್ಕಝ್ ನಾಲೆಜ್‌ಸಿಟಿ ಅಧೀನದ ‘ವಿರಾಸ್ ಕನ್ನಡ ವಿದ್ಯಾರ್ಥಿಗಳ ಸಂಘಟನೆ’ಯು ಕಾರ್ಯಕ್ರಮ ಆಯೋಜಿಸಿದೆ. ಮಾಹಿತಿಗಾಗಿ ಮೊಬೈಲ್‌:7902936986

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.