ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು: ಪೊಲೀಸರ ಸ್ಪಷ್ಟನೆ

ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರನ್ನು ಮನೆಗೆ ಕರೆದೊಯ್ದು ಸುರಕ್ಷಿತವಾಗಿ ತಲುಪಿಸುವ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 21:40 IST
Last Updated 22 ಆಗಸ್ಟ್ 2024, 21:40 IST
   

ಬೆಂಗಳೂರು: ‘ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರನ್ನು ಮನೆಗೆ ಕರೆದೊಯ್ದು ಸುರಕ್ಷಿತವಾಗಿ ತಲುಪಿಸುವ ಯೋಜನೆಯೊಂದನ್ನು ನಗರ ಪೊಲೀಸರು ಜಾರಿಗೆ ತಂದಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ‘ಅದು ಸುಳ್ಳು ಸುದ್ದಿ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆ ವೇಳೆಯಲ್ಲಿ ಮನೆಗೆ ತೆರಳಬೇಕಾದ ಮಹಿಳೆಯರು ಸಹಾಯವಾಣಿ(1091 ಹಾಗೂ 7837018555) ಕರೆ ಮಾಡಿ ವಾಹನಕ್ಕೆ ಕೋರಿಕೆ ಸಲ್ಲಿಸಿದರೆ ಅಲ್ಲಿಗೆ ಹತ್ತಿರದ ಠಾಣೆ ಪೊಲೀಸರು ಬಂದು ಮನೆಗೆ ಕರೆದೊಯ್ದು ಬಿಡುತ್ತಾರೆ. ಪ್ರಯಾಣ ಉಚಿತವಾಗಿರುತ್ತದೆ. ಈ ಸಂದೇಶವನ್ನು ಎಲ್ಲರಿಗೂ ಕಳುಹಿಸಿ ಎಂಬ ಸಂದೇಶ ಹರಿದಾಡುತ್ತಿದೆ.

ಎಲ್ಲ ಮಹಿಳೆಯರಿಗೂ ಅನ್ವಯ ಆಗುವಂತೆ ಈ ರೀತಿಯ ಉಚಿತ ಪ್ರಯಾಣ ಯೋಜನೆ ಜಾರಿ ಆಗಿಲ್ಲ. ಯಾವುದಾದರೂ ತುರ್ತು ಅಥವಾ ಅಪಾಯದ ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಿದರೆ ಅವರು ತಲುಪಬೇಕಾದ ಸ್ಥಳಕ್ಕೆ ಬಿಡಲಾಗುತ್ತಿದೆ. 2019ರಲ್ಲೂ ಇದೇ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.