ADVERTISEMENT

ಬೆಂಗಳೂರು ಮೆಟ್ರೊ: ಹಸಿರು ಮಾರ್ಗದಲ್ಲಿ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 9:29 IST
Last Updated 9 ಸೆಪ್ಟೆಂಬರ್ 2020, 9:29 IST
ಬೆಂಗಳೂರು ಮೆಟ್ರೊ (ಸಂಗ್ರಹ ಚಿತ್ರ)
ಬೆಂಗಳೂರು ಮೆಟ್ರೊ (ಸಂಗ್ರಹ ಚಿತ್ರ)   

ಬೆಂಗಳೂರು: ‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ 171 ದಿನಗಳ ನಂತರ ಮೆಟ್ರೊ ರೈಲು ಸಂಚಾರ ಪುನರಾರಂಭವಾಯಿತು.

ಯಲಚೇನಹಳ್ಳಿ ಮೆಟ್ರೊ ನಿಲ್ದಾಣದಿಂದ ಬುಧವಾರ ಬೆಳಿಗ್ಗೆ 8ಗಂಟೆಗೆ ಮೊದಲ ರೈಲು ನಾಗಸಂದ್ರಕ್ಕೆ ಸಾಗಿತು. ಈ ಮಾರ್ಗದಲ್ಲಿಯೂ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಬೆಳಿಗ್ಗೆ 11ರವರೆಗೆ ರೈಲುಗಳು ಸಂಚರಿಸಿದವು. ಬುಧವಾರ 96 ಬಾರಿ ಈ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ.

ನೇರಳೆ ಮಾರ್ಗದಲ್ಲಿ ಮೊದಲ ದಿನ 91 ಬಾರಿ ಸಂಚರಿಸಿದ್ದ ರೈಲುಗಳಲ್ಲಿ, 3,770 ಪ್ರಯಾಣಿಕರು ಸಂಚರಿಸಿದ್ದರು. ಈಗ ಹಸಿರು ಮತ್ತು ನೇರಳೆ ಮಾರ್ಗಗಳೆರಡರಲ್ಲೂ ಸಂಚಾರ ಆರಂಭವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಹೆಚ್ಚುವ ಸಾಧ್ಯತೆ ಇದೆ.

ADVERTISEMENT

ದಟ್ಟಣೆ ಮತ್ತು ಮಾನವ ಸಂಪರ್ಕ ತಡೆಗಟ್ಟುವ ಉದ್ದೇಶದಿಂದ ನಿಲ್ದಾಣಗಳಲ್ಲಿ ಟೋಕನ್‌ ವಿತರಿಸುತ್ತಿಲ್ಲ. ಹೊಸ ಸ್ಮಾರ್ಟ್‌ಕಾರ್ಡ್‌ ಪಡೆದು ಅಥವಾ ಹಳೆಯ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ.

ಸದ್ಯ ಬೆಳಿಗ್ಗೆ 3 ತಾಸು ಮತ್ತು ಸಂಜೆ ಮೂರು ಗಂಟೆ ಮಾತ್ರ ರೈಲುಗಳು ಸಂಚರಿಸಲಿವೆ. ಸೆ.11ರಿಂದ ಎರಡೂ ಮಾರ್ಗದಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ರೈಲುಗಳ ಸೇವೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.