ADVERTISEMENT

ಬೆಂಗಳೂರು: ಮಿಲಿಟರಿ ನರ್ಸಿಂಗ್ ಸರ್ವಿಸ್ ಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:14 IST
Last Updated 2 ಅಕ್ಟೋಬರ್ 2024, 16:14 IST
ಮಿಲಿಟರಿ ನರ್ಸಿಂಗ್ ಸೇವೆಯ (ಎಂಎನ್‌ಎಸ್‌) 99ನೇ ಸ್ಥಾಪಕ ದಿನಾಚರಣೆಯನ್ನು ನಗರದ ಕಮಾಂಡ್ ಹಾಸ್ಪಿಟಲ್ ಏರ್‌ ಫೋರ್ಸ್‌ನ (ಸಿಎಚ್‌ಎಎಫ್‌) ಎಂಎನ್‌ಎಸ್‌ ಅಧಿಕಾರಿಗಳು ಆಚರಿಸಿದರು
ಮಿಲಿಟರಿ ನರ್ಸಿಂಗ್ ಸೇವೆಯ (ಎಂಎನ್‌ಎಸ್‌) 99ನೇ ಸ್ಥಾಪಕ ದಿನಾಚರಣೆಯನ್ನು ನಗರದ ಕಮಾಂಡ್ ಹಾಸ್ಪಿಟಲ್ ಏರ್‌ ಫೋರ್ಸ್‌ನ (ಸಿಎಚ್‌ಎಎಫ್‌) ಎಂಎನ್‌ಎಸ್‌ ಅಧಿಕಾರಿಗಳು ಆಚರಿಸಿದರು   

ಬೆಂಗಳೂರು: ನಗರದ ಬೆಂಗಳೂರು ಕಮಾಂಡ್ ಹಾಸ್ಪಿಟಲ್ ಏರ್‌ ಫೋರ್ಸ್‌ನ (ಸಿಎಚ್‌ಎಎಫ್‌) ಮಿಲಿಟರಿ ನರ್ಸಿಂಗ್ ಸೇವೆಯ (ಎಂಎನ್‌ಎಸ್‌) ಅಧಿಕಾರಿಗಳು 99ನೇ ಸ್ಥಾಪನಾ ದಿನವನ್ನು ಮಂಗಳವಾರ ಆಚರಿಸಿದರು.

ಸಶಸ್ತ್ರ ಪಡೆಗಳ ಪ್ರಮುಖ ಭಾಗವಾಗಿ ಮಿಲಿಟರಿ ನರ್ಸಿಂಗ್ ಸೇವೆಯನ್ನು 1926ರಲ್ಲಿ ಸ್ಥಾಪಿಸಲಾಗಿತ್ತು. ಅದರ ನೆನಪಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಏರ್ ಮಾರ್ಷಲ್‌ ನಾಗೇಂದ್ರ ಕಪೂರ್‌ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು. ಸಿಎಚ್‌ಎಎಫ್ ಪ್ರಾಂಶುಪಾಲರಾದ ಬ್ರಿಗೇಡಿಯರ್‌ ಆರ್. ವಿಜಯರಾಣಿ, ಮಿಲಿಟರಿ ನರ್ಸಿಂಗ್ ಸೇವೆಯ ಮಾಜಿ ಹೆಚ್ಚುವರಿ ನಿರ್ದೇಶಕ ಮೇಜರ್ ಜನರಲ್ ಎಲಿಜಬೆತ್ ಜಾನ್ (ನಿವೃತ್ತ) ಅವರು ವೀರ ಯೋಧರಿಗೆ ನಮನ ಸಲ್ಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.