ADVERTISEMENT

ಕಲಬೆರಕೆ: 870 ಹಾಲಿನ ಮಾದರಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 16:12 IST
Last Updated 2 ಆಗಸ್ಟ್ 2025, 16:12 IST
.
.   

ಬೆಂಗಳೂರು: ಹಾಲಿನಲ್ಲಿ ಕಲಬೆರಕೆ ಪತ್ತೆ ಸಂಬಂಧ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ರಾಜ್ಯದಾದ್ಯಂತ 870 ಹಾಲಿನ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೆ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. 

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ಸಹಯೋಗದಲ್ಲಿ ಇಲಾಖೆಯು ಆ.1 ಮತ್ತು 2ರಂದು ಹಾಲಿನ ಮಾದರಿಗಳ ಸಂಗ್ರಹಣೆಗೆ ವಿಶೇಷ ಆಂದೋಲನ ನಡೆಸಿದೆ. ಈ ವೇಳೆ ಕೆಎಂಎಫ್‌ ಹಾಗೂ ಖಾಸಗಿ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳ ಗುಣಮಟ್ಟ ಪರೀಕ್ಷೆಗೆ ಇಲಾಖೆ ಹಾಗೂ ಕೆಎಂಎಫ್ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 

ಸಗಟು ಹಾಲು ಸಂಗ್ರಹ ಕೇಂದ್ರ (ಬಿಎಂಸಿ), ಹಾಲಿನ ಡೇರಿ ಹಾಗೂ ವಿತರಕರಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಹಾಲಿನ ಮಾದರಿಗಳನ್ನು ಪಡೆಯಲಾಗಿದ್ದು, ಮೈಸೂರಿನಲ್ಲಿ ಗರಿಷ್ಠ ಮಾದರಿ (72) ಸಂಗ್ರಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.