ADVERTISEMENT

ವಿದ್ಯಾರ್ಥಿ ನಾಪತ್ತೆ: ಪತ್ತೆಗೆ ನಾಲ್ಕು ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 23:30 IST
Last Updated 22 ಜನವರಿ 2024, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 12 ವರ್ಷದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ವಿದ್ಯಾರ್ಥಿಯ ಪತ್ತೆಗೆ ನಾಲ್ಕು ಪ್ರತ್ಯೇಕ ತಂಡ ರಚಿಸಿರುವ ಪೊಲೀಸರು ಶೋಧ ನಡೆಸುತ್ತಿದ್ದಾರೆ.

‘ಭಾನುವಾರ ವಿದ್ಯಾರ್ಥಿಯನ್ನು ಪೋಷಕರು ಟ್ಯೂಷನ್‌ಗೆ ಕಳುಹಿಸಿ ಮನೆಗೆ ತೆರಳಿದ್ದರು. ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ಯಲು ಪೋಷಕರು ಬರುವುದು ತಡವಾಗಿತ್ತು. ಅಷ್ಟರಲ್ಲಿ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ’ ಎಂದು ಹೇಳಲಾಗಿದೆ. 

ಭಾನುವಾರ ಮಧ್ಯಾಹ್ನದಿಂದ ಬಾಲಕ ಕಾಣಿಸುತ್ತಿಲ್ಲ. ಮಾರತ್‌ಹಳ್ಳಿ ಸೇತುವೆ ಬಳಿ ಬಿಎಂಟಿಸಿ ಬಸ್‌ ಹತ್ತಲು ವಿದ್ಯಾರ್ಥಿ ನಡೆದು ಸಾಗುತ್ತಿರುವ ದೃಶ್ಯ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿ ಅರಿಶಿಣ ಬಣ್ಣದ ಟಿ–ಶರ್ಟ್‌ ಧರಿಸಿದ್ದ. ಜತೆಗೆ ಬ್ಯಾಗ್‌ ಇತ್ತು. ಬಾಲಕ ಓದುತ್ತಿದ್ದ ಶಾಲೆ, ಟ್ಯೂಷನ್‌ ಬಳಿ ಹಾಗೂ ಆತ ನಡೆದು ಸಾಗುತ್ತಿರುವ ಬೇರೆ ಬೇರೆ ರಸ್ತೆಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ವಿದ್ಯಾರ್ಥಿ ಬಳಿ ಮೊಬೈಲ್‌ ಇರಲಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಲಕರ ನಾಪತ್ತೆ ಪ್ರಕರಣಗಳಲ್ಲಿ ಅಪಹರಣ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆಯಿದ್ದು ಅದರಂತೆ ವೈಟ್‌ಫೀಲ್ಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.