ADVERTISEMENT

ಇಂಟರ್ನೆಟ್‌ ದುರ್ಬಳಕೆ, ಕಾನೂನು ರಚನೆಯಾಗಲಿ: ಮೆಹ್ರಾನ್‌ ಸಹಮಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 20:08 IST
Last Updated 19 ಡಿಸೆಂಬರ್ 2021, 20:08 IST

ಬೆಂಗಳೂರು: ‘ಇಂಟರ್ನೆಟ್‌ ವ್ಯವಸ್ಥೆಯಲ್ಲಿ ಅಕ್ರಮ ನಡೆಸಲು ಅವಕಾಶ ಕಲ್ಪಿಸುವ ಹೊಸ ಹೊಸ ‘ಕುತಂತ್ರ’ಗಳಿಗೆ ಕೊನೆ ಎಂಬುದಿಲ್ಲ. ಇವುಗಳಿಗೆ ಕಡಿವಾಣ ಹಾಕಲು ಸಮರ್ಥ ಕಾನೂನುಗಳನ್ನು ತ್ವರಿತವಾಗಿ ರಚಿಸಿ ಜಾರಿಗೊಳಿಸಬೇಕು. ಈ ಪ್ರಕಿಯೆ ವಿಳಂಬ ಆದಷ್ಟೂ ಸವಾಲುಗಳು ಜಾಸ್ತಿ’ ಎಂದು ವಿಜ್ಞಾನಿ ಹಾಗೂ ಲೇಖಕ ಮೆಹ್ರಾನ್‌ ಸಹಮಿ ಅಭಿಪ್ರಾಯಪಟ್ಟರು.

ರಾಹುಲ್‌ ಮಥಾನ್‌ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಮೆಹ್ರಾನ್‌ ಅವರು ತಮ್ಮ, ‘ಸಿಸ್ಟಮ್‌ ಎರರ್‌: ವೇರ್‌ ಬಿಗ್‌ ಟೆಕ್‌ ವೆಂಟ್‌ ರಾಂಗ್‌ ಆ್ಯಂಡ್‌ ಹೌ ವಿ ಕ್ಯಾನ್‌ ರಿಬೂಟ್‌’ ಕೃತಿಯ ಬಗ್ಗೆ ಮಾತನಾಡಿದರು.

ಪ್ರಶ್ನೆಗೆ ಉತ್ತರಿಸಿದ ಮೆಹ್ರಾನ್‌, ‘ಇಂಟರ್ನೆಟ್‌ನಲ್ಲಿ ಪ್ರಕಟವಾಗಿದ್ದನ್ನು ನಕಲು ಮಾಡುವುದನ್ನು ತಡೆಯುವುದು ಕ್ಲಿಷ್ಟಕರ ಸವಾಲು. ಬೌದ್ಧಿಕ ಹಕ್ಕು ಸಂರಕ್ಷಣೆಗೆ ಕಠಿಣ ಕಾನೂನು ಜತೆಗೆ ತಂತ್ರಜ್ಞಾನದ ಪರಿಹಾರಗಳ ಮೊರೆ ಹೋಗುವ ಅನಿವಾರ್ಯಯಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.