
ಹೆಸರಘಟ್ಟ: ಹೆಸರಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ₹28 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಹಲವು ಅಭಿವೃದ್ಧಿ ಸೌಲಭ್ಯಗಳನ್ನು ಶಾಸಕ ಎಸ್.ಆರ್.ವಿಶ್ವನಾಥ್ ಅವರು ಜನರ ಬಳಕೆಗೆ ಮುಕ್ತಗೊಳಿಸಿದರು.
ಹೆಸರಘಟ್ಟ ಗ್ರಾಮದ ವಾರ್ಡ್ 2, 3, 8 ಮತ್ತು 9 ಹಾಗೂ ಕೊಡಗಿ ತಿರುಮಳಾಪುರ, ಹುರಳಿಚಿಕ್ಕನಹಳ್ಳಿ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಿವೆ.
ಬ್ಯಾಲಕೆರೆ ಹಾಗೂ ಗುಣಿ ಅಗ್ರಹಾರ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ವಿಶ್ವನಾಥ್, ‘ಹೆಸರಘಟ್ಟ ಭಾಗದಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಅನೇಕ ಕಬಡ್ಡಿ ಕ್ರೀಡಾಪಟುಗಳಿದ್ದಾರೆ. ಅವರಿಗೆ ಕ್ರೀಡಾಂಗಣದ ಕೊರತೆ ಇತ್ತು. ಈ ಕಾರಣದಿಂದ ₹2.50 ಕೋಟಿ ವೆಚ್ಚದಲ್ಲಿ ಕಬಡ್ಡಿ ಕೋರ್ಟ್ ನಿರ್ಮಿಸಲಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಸಲಕರಣೆಗಳನ್ನು ವಿತರಿಸಲಾಯಿತು.
ಸೇರ್ಪಡೆ: ಮುಖಂಡರಾದ ಮಂಜುನಾಥ್, ಕೆಂಪರಾಜು, ಗಂಗಾಧರ್, ವಸಂತ್, ನಾಗೇಶ್ ಸೇರಿದಂತೆ 100ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಈ ಸಂದರ್ಭದಲ್ಲಿ ಸೇರ್ಪಡೆಯಾದರು.
ಬಿಜೆಪಿ ಮುಖಂಡರಾದ ಅಲೋಕ್ ವಿಶ್ವನಾಥ್, ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಸಿ.ವೆಂಕಟೇಶ್, ಪಿ.ಕೆ.ರಾಜಣ್ಣ, ಎಚ್.ಸಿ.ರಾಜೇಶ್, ಕುಂಬಾರಹಳ್ಳಿ ಶ್ರೀನಿವಾಸಯ್ಯ, ಎಸ್.ಜಿ.ನರಸಿಂಹಮೂರ್ತಿ, ಅದ್ದೆ ವಿಶ್ವನಾಥಪುರ ಮಂಜುನಾಥ್, ಎಸ್.ಜಿ. ಪ್ರಶಾಂತ್‌ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.