ಬೆಂಗಳೂರು: ಮೊಬೈಲ್ ಕದ್ದುಕೊಂಡು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು ವಿಜಯನಗರ ಸಂಚಾರ ಠಾಣೆ ಪೊಲೀಸರು ಹಿಡಿದಿದ್ದು, ಕಳ್ಳರಿಂದ 9 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಕಾನ್‌ಸ್ಟೆಬಲ್‌ಗಳಾದ ಟಿ.ಎಸ್. ಕೃಷ್ಣಮೂರ್ತಿ ಹಾಗೂ ಮೆಹಬೂಬ ಅಲಿ ಫಕೀರ್ ನದಾಫ್ ಅವರು ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳ್ಳರ ಬೈಕ್ ತಡೆದು ಪರಿಶೀಲಿಸಿದ್ದರು. ಅವಾಗಲೇ ಅವರ ಬಳಿ ಮೊಬೈಲ್ ಸಿಕ್ಕಿದ್ದವು. ನಂತರವೇ ಅವರನ್ನು ವಿಜಯನಗರ ಠಾಣೆಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.