ನಗರದಲ್ಲಿ ಸಂಜೆ ಸುರಿದ ಮಳೆಯಲ್ಲಿ ಜನರು ಕೊಡೆ ಹಿಡಿದು ಹೆಜ್ಜೆ ಹಾಕಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಶುಕ್ರವಾರ ವಿವಿಧೆಡೆ ಉತ್ತಮವಾಗಿ ಸುರಿಯಿತು.
ಶುಕ್ರವಾರ ಬೆಳಿಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲವು ಭಾಗದಲ್ಲಿ ಮಳೆಯಾಯಿತು. ಸಂಜೆ ವೇಳೆಗೆ ಹಲವೆಡೆ ಮಳೆಯಾಯಿತು.
ಹೇರೋಹಳ್ಳಿ, ಚೌಡೇಶ್ವರಿ ವಾರ್ಡ್, ಯಲಹಂಕ, ಪೀಣ್ಯ, ನಂದಿನಿ ಬಡಾವಣೆ, ಮಾರುತಿ ಮಂದಿರ, ಹಂಪಿನಗರ, ಶೆಟ್ಟಿಹಳ್ಳಿ, ಬಾಗಲಗುಂಟೆ, ಕೆಂಗೇರಿ, ನಾಯಂಡಹಳ್ಳಿ, ಆರ್‌ಆರ್ ನಗರ, ಯಶವಂತಪುರ, ಹೆಬ್ಬಾಳ, ವನ್ನಾರ್‌ಪೇಟೆ, ಬಿಟಿಎಂ ಲೇಔಟ್, ಮಾರತ್‌ಹಳ್ಳಿ, ಮಹದೇವಪುರ, ವಿಜ್ಞಾನನಗರ, ಹೂಡಿ, ಪುಲಕೇಶಿನಗರ, ಸಂಪಂಗಿರಾಮನಗರ, ಕಾಟನ್‌ಪೇಟೆ, ರಾಜಮಹಲ್ ಗುಟ್ಟಹಳ್ಳಿ, ವಿಶ್ವನಾಥ್ ನಾಗೇನಹಳ್ಳಿ, ಕೊಡಿಗೆಹಳ್ಳಿ ಸಹಿತ ವಿವಿಧೆಡೆ ಮಳೆ ಸುರಿಯಿತು.
ಮಿಂಚು, ಗುಡುಗು ಅಬ್ಬರ ಕಡಿಮೆಯಾಗಿತ್ತು. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ಹಲವು ಕಡೆಗಳಲ್ಲಿ ರಸ್ತೆಯಲ್ಲಿಯೇ ಮಳೆನೀರು ಹರಿಯಿತು.
ಮಳೆ ಪ್ರಮಾಣ: ಹೇರೋಹಳ್ಳಿ 2.7 ಸೆಂ.ಮೀ., ಚೌಡೇಶ್ವರಿ ವಾರ್ಡ್ 1.6 ಸೆಂ.ಮೀ., ಯಲಹಂಕ 1.5 ಸೆಂ.ಮೀ., ಪೀಣ್ಯ ಕೈಗಾರಿಕಾ ಪ್ರದೇಶ–1.4 ಸೆಂ.ಮೀ., ನಂದಿನಿ ಬಡಾವಣೆ 1.3 ಸೆಂ.ಮೀ., ಮಾರುತಿ ಮಂದಿರ 1.2 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.