ADVERTISEMENT

ನೆಲಮಂಗಲ | ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿದ ತಾಯಿ: ಮಗು ಸಾವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 15:54 IST
Last Updated 7 ಜುಲೈ 2025, 15:54 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ನೆಲಮಂಗಲ: ಪಟ್ಟಣದ ವಿಶ್ವೇಶ್ವರಪುರದಲ್ಲಿ ಒಂದು ತಿಂಗಳ ಮಗುವನ್ನು ತಾಯಿ ಬಿಸಿನೀರಿನ ಹಂಡೆಗೆ ಹಾಕಿದ್ದು, ಆ ಮಗು ಸಾವಿಗೀಡಾಗಿದೆ.

ಮಗು ಸಾವಿಗೆ ಕಾರಣವಾದ ತಾಯಿ ರಾಧಾ(28) ಅವರನ್ನು ನೆಲಮಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

‘ಮಗು ಅವಧಿ ಪೂರ್ವವಾಗಿ ಜನಿಸಿದೆ. ಒಂದು ತಿಂಗಳಿಂದ ಹಾಲು ಕುಡಿಯುತ್ತಿರಲಿಲ್ಲ. ಮಗು ಸಹಜವಾಗಿಲ್ಲ ಎಂದು ತಾಯಿ ರಾಧಾ ಅವರು ಭಾವಿಸಿದ್ದರು. ಹೆರಿಗೆಯ ಬಳಿಕ ಅವರು ಮಾನಸಿಕವಾಗಿ ನೊಂದಿದ್ದರು’ ಎಂದು ಮೂಲಗಳು ಹೇಳಿವೆ.

‘ರಾಧಾ ಸೋಮವಾರ ಬೆಳಿಗ್ಗೆ ಹಂಡೆಯ ಒಲೆಗೆ ಬೆಂಕಿ ಹಾಕಿ, ಬಿಸಿ ನೀರು ಕಾಯಿಸಿದ್ದರು. ಆ ಹಂಡೆಗೆ ಮಗುವನ್ನು ಹಾಕಿದ್ದರಿಂದ ಮಗು ಮೃತಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ.

ರಾಧಾ ಪತಿ ಆಟೊ ಚಾಲಕನಾಗಿದ್ದಾರೆ. ಅವರಿಗೆ ವಿಪರೀತ ಮದ್ಯ ಸೇವಿಸುವ ಚಟವಿದೆ ಎಂದು ಸ್ಥಳೀಯರು ತಿಳಿಸಿದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.