ADVERTISEMENT

ಸಿಎಂ ವಿರುದ್ಧದ ಷಡ್ಯಂತ್ರ ವಿಫಲಗೊಳಿಸಿ: ಬಸವನಾಗಿದೇವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 21:48 IST
Last Updated 9 ಆಗಸ್ಟ್ 2024, 21:48 IST
ಬಸವನಾಗಿದೇವ ಸ್ವಾಮೀಜಿ
ಬಸವನಾಗಿದೇವ ಸ್ವಾಮೀಜಿ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪುರೋಹಿತಶಾಹಿಗಳ ಕುಟಿಲ ತಂತ್ರಗಾರಿಕೆಗಳನ್ನು ರಾಜ್ಯದ ಜನರು ವಿಫಲಗೊಳಿಸಬೇಕು ಎಂದು ಚಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಕರೆ ನೀಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ ಹಗರಣದ  ಬಗ್ಗೆ ತನಿಖೆ ನಡೆಸಲು ಪಿ.ಎನ್. ದೇಸಾಯಿ ನೇತೃತ್ವದ ತನಿಖಾ ಆಯೋಗ ರಚಿಸಲಾಗಿದೆ. ಈ ಆಯೋಗ ರಚಿಸಿರುವುದಕ್ಕೆ ರಾಜ್ಯಪಾಲರಿಗೆ ಅಸಮಾಧಾನವಿದ್ದರೆ ಅದನ್ನು ಬಗೆಹರಿಸಿಕೊಳ್ಳಬಹುದಿತ್ತು’ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೋವಿ ನಿಗಮದ ಹಗರಣ ಮತ್ತು ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಪರಿಶಿಷ್ಟರ ಅಭಿವೃದ್ದಿಗಾಗಿ ಸ್ಥಾಪಿಸಲಾಗಿರುವ ನಿಗಮ–ಮಂಡಳಿಗಳ ಕಾರ್ಯವೈಖರಿಯ ಕರಾಳತೆಗೆ ಹಿಡಿದ ಕೈಗನ್ನಡಿಯಾಗಿದೆ. ವಾಲ್ಮೀಕಿ ಹಗರಣದಲ್ಲಿ ತಪ್ಪಿತಸ್ಥರನ್ನು ಜೈಲಿಗಟ್ಟಿರುವಂತೆ, ಭೋವಿ ನಿಗಮ ಸೇರಿದಂತೆ ಎಲ್ಲಾ ಹಗರಣಗಲ್ಲಿ ಶಾಮೀಲಾಗಿರುವವರ ಭ್ರಷ್ಟರನ್ನು ಕಾನೂನಿನ ಕೈಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.