ಬೆಂಗಳೂರು: ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಪಿ.ಎನ್. ರಾಘವೇಂದ್ರ (65) ಅವರನ್ನು ಕೊಂದು ಚಿನ್ನಾಭರಣ ದೋಚಿದ್ದ ಅಪರಾಧಿ ವೈ. ರಾಮಾಂಜನೇಯಲು ಅಲಿಯಾಸ್ ಶ್ರೀರಾಮ್ (35) ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ನ್ಯಾಯಾಲಯ ಆದೇಶ ಹೊರಡಿಸಿದೆ.
ಬನಶಂಕರಿ 3ನೇ ಹಂತದ ಇಟ್ಟಮಡುವಿನಲ್ಲಿ ವಾಸವಿದ್ದ ವೃದ್ಧ ರಾಘವೇಂದ್ರ ಅವರನ್ನು 2014ರ ಡಿಸೆಂಬರ್ 17ರಂದು ಕೊಲೆ ಮಾಡಲಾಗಿತ್ತು. ಅವರ ಪತ್ನಿ ಸುಧಾಕುಮಾರಿ ಕೊಲೆಗೂ ಯತ್ನಿಸಲಾಗಿತ್ತು. ಪ್ರಕರಣದಲ್ಲಿ ರಾಮಾಂಜನೇಯಲುನನ್ನು ಬಂಧಿಸಿದ್ದ ಚನ್ನಮ್ಮನಕೆರೆ ಅಚ್ಚಕಟ್ಟು ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಿ.ಕೆ. ಶೇಖರ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.