ADVERTISEMENT

‘ನಾದೋಪಾಸನ’ ಸಂಗೀತ ಸಂಜೆ ಇಂದು

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:45 IST
Last Updated 10 ಜೂನ್ 2022, 19:45 IST
ಉದಯಶಂಕರ್
ಉದಯಶಂಕರ್   

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಂಜಿನಿಯರ್‌ಗಳಾಗಿ ಕೆಲಸ ಮಾಡಿದವರು ಸೇರಿ ರಚಿಸಿಕೊಂಡಿರುವ ‘ನಾದೋಪಾಸನ’ ಸಂಸ್ಥೆ ಆಶ್ರಮವಾಸಿಗಳ ಸಹಾಯಾರ್ಥವಾಗಿ ‘ಒಳಿತು ಮಾಡು ಮನುಜ’ ಆಶಯದಡಿ ಶನಿವಾರ (ಜೂ. 11) ಸಂಜೆ ಸುಮಧುರ ಸಂಗೀತ ಸಂಜೆ ಏರ್ಪಡಿಸಿದೆ.

‘ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ 5ರಿಂದ 9ರವರೆಗೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಟ ವಿಜಯ ರಾಘವೇಂದ್ರ ಹಾಗೂ ಸಂಗೀತ ನಿರ್ದೇಶಕ ವಿ. ಮನೋಹರ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಿಂದ ಸಂಗ್ರಹವಾಗುವ ಮೊತ್ತವನ್ನು ಅಂಧರು, ಅನಾಥರು, ಅಂಗವಿಕಲರು ಹಾಗೂ ವೃದ್ಧರಿಗಾಗಿ ನಡೆಸುವ ಆಶ್ರಮಗಳಿಗೆ ನೀಡುತ್ತೇವೆ’ ಎಂದು ಸಂಸ್ಥೆಯ ಅಧ್ಯಕ್ಷ ನಿವೃತ್ತ ಮುಖ್ಯ ಎಂಜಿನಿಯರ್‌ ಡಿ. ಉದಯಶಂಕರ್ ತಿಳಿಸಿದ್ದಾರೆ.

8 ವರ್ಷದ ಹಿಂದೆ ಆರಂಭವಾದ ಈ ಸಂಸ್ಥೆಯಲ್ಲಿ ಇರುವ ಬಹುತೇಕರು ಎಂಜಿನಿಯರ್‌ಗಳು. ಸಂಗೀತ ಸಂಜೆಯಲ್ಲಿ ಹಾಡುವವರು ಕೂಡ ಇವರೇ. ಕಾರ್ಯಕ್ರಮದಲ್ಲಿ ವಿವಿಧ ಆಶ್ರಮಗಳಲ್ಲಿರುವ ವೃದ್ಧರು, ಅಂಗವಿಕಲರು, ಅಂಧರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.