ADVERTISEMENT

ಬೆಂಗಳೂರು: ಸಿಎಂಆರ್ ವಿ.ವಿ.ಗೆ ‘ನ್ಯಾಕ್ ಎ’ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 18:44 IST
Last Updated 9 ಆಗಸ್ಟ್ 2025, 18:44 IST
   


ಬೆಂಗಳೂರು: ನಗರದ ಸಿಎಂಆರ್ ವಿಶ್ವ ವಿದ್ಯಾಲಯಕ್ಕೆ ‘ನ್ಯಾಕ್ ಎ ಗ್ರೇಡ್ ಮಾನ್ಯತೆ’ ಲಭಿಸಿದೆ. ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರಿಡೇಷನ್‌ ಕೌನ್ಸಿಲ್(ನ್ಯಾಕ್), ಮೊದಲ ಅವಧಿಯಲ್ಲಿ 5 ವರ್ಷಗಳಿಗೆ ‘ನ್ಯಾಕ್ ಎ’ ಮಾನ್ಯತೆಯನ್ನು ನೀಡಿದೆ. 

ನ್ಯಾಕ್ ‘ಎ’ ಮಾನ್ಯತೆ ಮತ್ತು ಮನ್ನಣೆ ಕುರಿತು ಮಾತನಾಡಿದ ಸಿಎಂಆರ್ ವಿಶ್ವವಿದ್ಯಾಲಯದ ಕುಲಪತಿ ಎಚ್.ಬಿ. ರಾಘವೇಂದ್ರ ‘ಈ ಸಾಧನೆಗೆ ಆಡಳಿತ ಮಂಡಳಿಯ ಸಮರ್ಪಣಾ ಮನೋಭಾವ ಮತ್ತು ಸಮರ್ಥ ನಾಯಕತ್ವ, ನುರಿತ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ, ಪ್ರತಿಭಾವಂತ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಶ್ರಮ ಈ ಸಾಧನೆಗೆ ಕಾರಣ’ ಎಂದು ಹೇಳಿದರು.

ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ದೇಶಕ್ಕೆ ಸಮರ್ಥ ಸಂಪನ್ಮೂಲರಾಗಬಲ್ಲ ವೃತ್ತಿಪರ ವಿದ್ಯಾರ್ಥಿ ಸಮುದಾಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ. ನ್ಯಾಕ್ ಎ ಮಾನ್ಯತೆ ಪಡೆದಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ಹರ್ಷ
ವ್ಯಕ್ತಪಡಿಸಿದರು.

ADVERTISEMENT

ನ್ಯಾಕ್ ಮಾನದಂಡಗಳು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹಾಗೂ ನಿರ್ವಹಣಾ
ಸಾಮರ್ಥ್ಯವನ್ನು ಕಾಪಾಡಿಕೊಂಡು ಸದಾ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ. ಈ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಸದಾ ಆತ್ಮವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ಮುನ್ನಡೆಯಲು ಬದ್ಧವಾಗಿದೆ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.