ಬೆಂಗಳೂರು: ನಮ್ದೆ ನಟನೆ ಸಾಂಸ್ಕೃತಿಕ ಸಂಘಟನೆಯು ಇದೇ ಭಾನುವಾರ (ಜೂನ್ 22) ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
90 ನಿಮಿಷಗಳ ಈ ನಾಟಕವನ್ನು ರಾಜೇಂದ್ರ ಕಾಮತ್ ಅವರು ರಚಿಸಿ, ನಿರ್ದೇಶಿಸಿದ್ದಾರೆ. ನಾಟಕದ ಟಿಕೆಟ್‌ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯವಿದೆ ಎಂದು ಸಂಘಟನೆಯ ಶ್ರೀಹರ್ಷ ಹುಣಸೂರು ತಿಳಿಸಿದ್ದಾರೆ.
ನಾಟಕದ ಬಗ್ಗೆ: ‘ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿ ಹಲವು ತ್ಯಾಗ ಮಾಡುತ್ತಾರೆ. ಆದರೆ, ಮಕ್ಕಳು ವೃತ್ತಿ, ಹೆಚ್ಚಿನ ಸಂಬಳದ ನೆಪದೊಂದಿಗೆ ವಿದೇಶಕ್ಕೆ ತೆರಳಿ, ವೃದ್ಧ ತಂದೆ–ತಾಯಿಯಿಂದ ದೂರವಾಗುತ್ತಾರೆ. ಮಗ ವಿದೇಶಕ್ಕೆ ಹೋದ ಸಂಕಟದ ಜತೆಗೆ ಆತನ ನಾಯಿಯನ್ನೂ ಸಾಕಬೇಕಾದ ಪೋಷಕರ ಸಂಕಷ್ಟದ ಕತೆಯನ್ನು ಈ ನಾಟಕ ಅನಾವರಣ ಮಾಡಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.