ADVERTISEMENT

ನಾಗದೇವನಹಳ್ಳಿ: ಭೂತಪ್ಪಸ್ವಾಮಿ ದೇವರ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:56 IST
Last Updated 8 ಮೇ 2025, 15:56 IST
<div class="paragraphs"><p>ನಾಗದೇವನಹಳ್ಳಿಯ ಭೂತಪ್ಪಸ್ವಾಮಿ ದೇವರ ಉತ್ಸವ</p></div>

ನಾಗದೇವನಹಳ್ಳಿಯ ಭೂತಪ್ಪಸ್ವಾಮಿ ದೇವರ ಉತ್ಸವ

   

ರಾಜರಾಜೇಶ್ವರಿನಗರ: ಶ್ರೀಭೂತಪ್ಪಸ್ವಾಮಿ ದೇವರ ಉತ್ಸವ, ಊರಹಬ್ಬ, ಸಾಂಸ್ಕೃತಿಕ ಉತ್ಸವ, ಗ್ರಾಮೀಣ ಉತ್ಸವ ದೊಡ್ಡಗೊಲ್ಲರಹಟ್ಟಿ, ನಾಗದೇವನಹಳ‍್ಳಿಯಲ್ಲಿ ಸಂಭ್ರಮದಿಂದ ನಡೆಯಿತು.

ದೇವರ ಉತ್ಸವ ಮೆರವಣಿಗೆ, ಪೂಜಾ ಕುಣಿತ, ಪಟದ ಕುಣಿತಗಳೊಂದಿಗೆ ಜಾನಪದ ಕಲೆಗಳ ಪ್ರದರ್ಶನ ನಡೆಯಿತು. ಮಧ್ಯರಾತ್ರಿಯಿಂದಲೇ ನೂರಾರು ಹೆಣ್ಣುಮಕ್ಕಳು ತಂಬಿಟ್ಟಿನ ಆರತಿ, ಕಳಸದೊಂದಿಗೆ ದೇವರ ಉತ್ಸವ, ಮೆರವಣಿಗೆಯೊಂದಿಗೆ ರಸ್ತೆ ಬೀದಿಯಲ್ಲಿ ಸಾಗಿ ಬಂದರು.

ADVERTISEMENT

ಭೂತಪ್ಪದೇವಸ್ಥಾನದ ಆವರಣದಲ್ಲಿ ತಮಟೆ, ನಗಾರಿ, ವಾದ್ಯಗೋಷ್ಠಿ, ಪೂಜಾಕುಣಿತ ಸಮಯದಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು.

ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ‘ನಮ್ಮ ಪೂರ್ವಿಕರೂ ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಭೂತಪ್ಪಸ್ವಾಮಿ ಉತ್ಸವವನ್ನು ಹಿರಿಯರು, ಗ್ರಾಮಸ್ಥರ ನೆರವಿನೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದರು.

ಮುಖಂಡ ಎನ್.ಸಿ.ಕುಮಾರ್, ‘ನೂರಾರು ವರ್ಷಗಳಿಂದ ನಮ್ಮ ಹಿರಿಯರು ಆಚರಿಸುತ್ತಿರುವ ಗೊಲ್ಲ ಜನಾಂಗದ ಆರಾಧ್ಯ ದೈವ ಭೂತಪ್ಪಸ್ವಾಮಿ ಉತ್ಸವವನ್ನು ಗ್ರಾಮೀಣ ಸಂಸ್ಕೃತಿಯಲ್ಲಿ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.