ಬೆಂಗಳೂರು: ‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ಮೂರು ಬೋಗಿಗಳ ಮತ್ತೆರಡು ರೈಲುಗಳನ್ನು ಆರು ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಸೋಮವಾರದಿಂದ ಈ ರೈಲುಗಳು ಸಂಚಾರ ಆರಂಭಿಸಲಿವೆ.
ಇವುಗಳ ಸೇರ್ಪಡೆಯಿಂದ ಹಸಿರು ಮಾರ್ಗದಲ್ಲಿ ಸಂಚರಿಸಲಿರುವ ಆರು ಬೋಗಿ ರೈಲುಗಳ ಸಂಖ್ಯೆ 16ಕ್ಕೆ ಏರಿದಂತಾಗಿದೆ. ಭಾನುವಾರ ಹೊರತು ಪಡಿಸಿ, ಆರು ಬೋಗಿಗಳ ಎಲ್ಲ ರೈಲುಗಳು ಒಟ್ಟು 125 ಬಾರಿ ಸಂಚರಿಸಲಿವೆ ಎಂದು ನಿಗಮ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.