ADVERTISEMENT

ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಅವಧಿ 10 ವರ್ಷ !

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 22:33 IST
Last Updated 21 ಸೆಪ್ಟೆಂಬರ್ 2020, 22:33 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರಿಗೆ ವಿತರಿಸಿರುವ ಸ್ಮಾರ್ಟ್‌ಕಾರ್ಡ್‌ ಅವಧಿಯನ್ನು (ವ್ಯಾಲಿಡಿಟಿ) 10 ವರ್ಷಕ್ಕೆ ಏರಿಕೆ ಮಾಡಿದೆ. ಅಂದರೆ, 2030ರ ಸೆಪ್ಟೆಂಬರ್‌ವರೆಗೆ ವಿಸ್ತರಿಸಿದೆ.

ಅವಧಿ ಮುಗಿದಿರುವ ಸ್ಮಾರ್ಟ್‌ಕಾರ್ಡ್‌ಗಳನ್ನು ಪುನರ್‌ ಸಕ್ರಿಯಗೊಳಿಸಲು ಸದ್ಯ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದೂ ನಿಗಮ ಹೇಳಿದೆ.

ಕಾರ್ಡ್‌ಗಳ ಊರ್ಜಿತತೆ ಮೊದಲು ಒಂದು ವರ್ಷ ಇತ್ತು. ಇವುಗಳನ್ನು ಮೆಟ್ರೊ ನಿಲ್ದಾಣಗಳಲ್ಲಿಯೇ ಪುನರ್‌ ಕ್ರಿಯಗೊಳಿಸಬೇಕಾಗಿತ್ತು. ಈ ವೇಳೆ ದಟ್ಟಣೆ ಉಂಟಾಗುತ್ತಿತ್ತು ಮತ್ತು ಪ್ರಯಾಣಿಕರೂ ಅನೇಕ ಸಮಸ್ಯೆ ಎದುರಿಸಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಿಗಮ ಈ ನಿರ್ಧಾರ ಕೈಗೊಂಡಿದೆ.

ADVERTISEMENT

ಸ್ಮಾರ್ಟ್‌ಕಾರ್ಡ್‌ಗಳ ರಿಚಾರ್ಜ್‌ಗೂ ವಿವಿಧ ಆಯ್ಕೆಗಳನ್ನು ನೀಡಿರುವ ಬಿಎಂಆರ್‌ಸಿಎಲ್, ನಿಗಮದ ವೆಬ್‌ಸೈಟ್, ನೆಟ್‌ ಬ್ಯಾಂಕಿಂಗ್ ಮತ್ತು ನಿಗಮದ ಮೊಬೈಲ್‌ ಆ್ಯಪ್‌ ಮೂಲಕವೂ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.