ADVERTISEMENT

ಗುಲಾಬಿ ಮೆಟ್ರೊ: ಏಪ್ರಿಲ್‌ ಅಂತ್ಯಕ್ಕೆ ಪರೀಕ್ಷೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 16:43 IST
Last Updated 10 ಜನವರಿ 2026, 16:43 IST
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ರೋಲಿಂಗ್‌ ಸ್ಟಾಕ್‌ ಪರೀಕ್ಷೆ ನಡೆಸಲು ಸಜ್ಜಾಗಿರುವ ಬಿಎಂಆರ್‌ಸಿಎಲ್‌ ಸಿಬ್ಬಂದಿ
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ರೋಲಿಂಗ್‌ ಸ್ಟಾಕ್‌ ಪರೀಕ್ಷೆ ನಡೆಸಲು ಸಜ್ಜಾಗಿರುವ ಬಿಎಂಆರ್‌ಸಿಎಲ್‌ ಸಿಬ್ಬಂದಿ   

ಬೆಂಗಳೂರು: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ರೋಲಿಂಗ್‌ ಸ್ಟಾಕ್‌ ಪರೀಕ್ಷೆಗಳು ಜ.11ರಿಂದ ಆರಂಭವಾಗಲಿದ್ದು, ಏಪ್ರಿಲ್‌ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ.

ಸುಮಾರು 7.5 ಕಿ.ಮೀ ಉದ್ದದ ಗುಲಾಬಿ ಮಾರ್ಗದ ಮುಖ್ಯ ಪರೀಕ್ಷೆಗಳನ್ನು ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುತ್ತದೆ. ನೈಜ ಕ್ಷೇತ್ರ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಕ್ಷಮತೆ ಮತ್ತು ವ್ಯವಸ್ಥೆಗಳ ಪರಿಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನೂ ಒಳಗೊಂಡಿರುತ್ತದೆ. ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿವೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ಜ.11ರಿಂದ ಏಪ್ರಿಲ್‌ ಮಧ್ಯಭಾಗದವರೆಗೆ ಟ್ರ್ಯಾಕ್ಷನ್‌– ಬ್ರೇಕ್‌, ಆಸಿಲೇಷನ್‌, ಸಿಗ್ನಲಿಂಗ್‌, ವಿದ್ಯುತ್‌ ಮತ್ತು ದೂರಸಂಪರ್ಕದ ವ್ಯವಸ್ಥೆಗಳೊಂದಿಗೆ ಏಕೀಕರಣ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. 

ADVERTISEMENT

ಗುಲಾಬಿ ಮಾರ್ಗ ಯೋಜನೆಯಲ್ಲಿ ಈ ಪರೀಕ್ಷೆ ನಡೆಸುತ್ತಿರುವುದು ಮಹತ್ವದ ಮೈಲಿಗಲ್ಲು. ಸಾರ್ವಜನಿಕ ಸೇವೆಗೆ ಈ ಮಾರ್ಗ ತೆರೆಯುವ ಮುನ್ನ ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್‌ಸಿಎಲ್‌ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.