ADVERTISEMENT

ONDC ಮೂಲಕ ನಮ್ಮ ಮೆಟ್ರೊ ಪ್ರಯಾಣದ ಟಿಕೆಟ್‌ಗಳು ಈ 9 ಆ್ಯಪ್‌ಗಳಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 15:23 IST
Last Updated 8 ಜುಲೈ 2025, 15:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮೊಬೈಲ್ ಆ್ಯಪ್, ವಾಟ್ಸ್‌ಆ್ಯಪ್ ಚಾಟ್‌ಬಾಟ್‌, ಪೇಟಿಎಂಗಳ ಜೊತೆಗೆ, ಇನ್ನೂ ಒಂಬತ್ತು ಆ್ಯಪ್‌ಗಳ ಮೂಲಕ ‘ನಮ್ಮ ಮೆಟ್ರೊ’ ಪ್ರಯಾಣದ ಟಿಕೆಟ್‌ ಖರೀದಿಸುವ ವ್ಯವಸ್ಥೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಚಾಲನೆ ನೀಡಿದೆ.

ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಜಾಲದಲ್ಲಿರುವ ಈ ಆ್ಯಪ್‌ಗಳ ಮೂಲಕ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ಪಡೆಯಬಹುದಾಗಿದೆ.

ಇನ್ನು ಮುಂದೆ ಈಗಿರುವ ಸೌಲಭ್ಯಗಳ ಜೊತೆಗೆ ಈಸ್ ಮೈ ಟ್ರಿಪ್, ಹೈವೇ ಡಿಲೈಟ್, ಮೈಲ್ಸ್ ಆ್ಯಂಡ್ ಕಿಲೋಮೀಟರ್ಸ್ ವಯಾ ಟೆಲಿಗ್ರಾಂ, ನಮ್ಮ ಯಾತ್ರಿ, ಒನ್ ಟಿಕೆಟ್, ರ‍್ಯಾಪಿಡೊ, ರೆಡ್ ಬಸ್, ಟ್ಯುಮೊಕ್, ಯಾತ್ರಿ - ಸಿಟಿ ಟ್ರಾವೆಲ್ ಗೈಡ್ ಆ್ಯಪ್‌ಗಳ ಮೂಲಕವೂ ಪ್ರಯಾಣಿಕರು ‘ನಮ್ಮ ಮೆಟ್ರೊ’ದ ಕ್ಯೂಆರ್ ಕೋಡ್‌ ಆಧಾರಿತ ಟಿಕೆಟ್‌ಗಳನ್ನು ಖರೀದಿಸಬಹುದು.

ADVERTISEMENT

‘2023ರಿಂದ ಓಎನ್‌ಡಿಸಿ ನೆಟ್‌ವರ್ಕ್‌ನಲ್ಲಿ ಆಟೊ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿದ್ದವು. ಈಗ ಮೆಟ್ರೊ ರೈಲು ಟಿಕೆಟ್‌ಗಳನ್ನೂ ಸೇರಿಸಿರುವುದರಿಂದ, ಪ್ರಯಾಣಿಕರು ಮನೆಯಿಂದ ತಾವು ತಲುಪಬೇಕಿರುವ ಸ್ಥಳದವರೆಗಿನ ಪ್ರಯಾಣವನ್ನು ಒಂದೇ ಆ್ಯಪ್‌ ಮೂಲಕ ಯೋಜಿಸಬಹುದು. ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.