ADVERTISEMENT

'ವಲಸಿಗರಿಂದ ಬೆಂಗಳೂರು ರಕ್ಷಿಸಿ' - ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:33 IST
Last Updated 19 ನವೆಂಬರ್ 2019, 2:33 IST
ಮೋಹನ್ ಕುಮಾರ್‌ 
ಮೋಹನ್ ಕುಮಾರ್‌    

ವಲಸಿಗರನ್ನು ತಡೆಯಬೇಕು

ನಗರದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಪ್ರತಿದಿನ ಪತ್ರಿಕೆಗಳಲ್ಲಿ ವರದಿ ಪ್ರಕಟ ಆಗುತ್ತಿದೆ. ಇವರಿಂದ ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಅಪಾಯ ಎದುರಾಗುವ ಮುನ್ನವೇ ನಿಯಂತ್ರಣ ಅಗತ್ಯ.

ಬಾಲಕೃಷ್ಣ, ಆರ್.ಟಿ.ನಗರ

ADVERTISEMENT

ಬಂಧನವೇ ಸೂಕ್ತ

ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಬಂಧಿಸುವುದೇ ಉತ್ತಮ ನಿರ್ಧಾರ. ಇದರಿಂದ ವಲಸಿಗರಲ್ಲಿ ಭಯ ಹುಟ್ಟಲಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ವಲಸಿಗರ ನಗರ ಆಗಲಿದೆ.

ಭರತ್, ಬೆಂಗಳೂರು ನಿವಾಸಿ

ಉದ್ಯೋಗ ಕಸಿಯುತ್ತಾರೆ

ಎಲ್ಲಿಂದಲೋ ಬಂದು ಅಕ್ರಮವಾಗಿ ನೆಲೆಸುವ ವಲಸಿಗರು ಕಡಿಮೆ ಸಂಬಳಕ್ಕೆ ಉದ್ಯೋಗ ಪಡೆಯುತ್ತಾರೆ. ಇವರಿಗೇ ಆದ್ಯತೆ ನೀಡುವ ಸಂಸ್ಥೆಗಳು ಸ್ಥಳೀಯರಿಗೆ ಉದ್ಯೋಗ ನೀಡುವುದಿಲ್ಲ. ಈ ದುಸ್ಥಿತಿಯಿಂದಲೇ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಹೆಚ್ಚಾಗಿದೆ.

ಮಹಮ್ಮದ್ ಇಬ್ರಾಹಿಂ, ಮಾಗಡಿ ರಸ್ತೆ

ಆಶ್ರಯ ನೀಡುವವರ ಮೇಲೆ ಕ್ರಮ ಕೈಗೊಳ್ಳಿ

ನಗರದಲ್ಲಿ ವಲಸಿಗರಿಗೆ ಆಶ್ರಯ ನೀಡುವವರೂ ಇದ್ದಾರೆ. ಇವರಿಂದಲೇ ನಿತ್ಯ ಸಾವಿರಾರು ಮಂದಿ ವಲಸಿಗರು ಬೀಡುಬಿಡುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಇವರಿಗೆ ಮೂಲಸೌಕರ್ಯ ಒದಗಿಸಿ ಸೂರು ನೀಡುವವರ ಮೇಲೆ ಕ್ರಮ ಕೈಗೊಳ್ಳಬೇಕು.

ಮೋಹನ್ ಕುಮಾರ್, ಮಹಾಲಕ್ಷ್ಮಿ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.