ADVERTISEMENT

ಕನ್ನಡತಿ ನಂದಿನಿ ಗುಜರ್‌ಗೆ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 13:16 IST
Last Updated 3 ಡಿಸೆಂಬರ್ 2024, 13:16 IST
<div class="paragraphs"><p>ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಸ್ವೀಕರಿಸಿದ ನಂದಿನಿ&nbsp;ರಾವ್&nbsp;ಗುಜ</p></div>

ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಸ್ವೀಕರಿಸಿದ ನಂದಿನಿ ರಾವ್ ಗುಜ

   

ಬೆಂಗಳೂರು: 2022ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿಗೆ ಕನ್ನಡತಿ, ಪುಣೆಯಲ್ಲಿ ವಾಸ್ತವ್ಯವಿರುವ ಗಾಯಕಿ ನಂದಿನಿ ರಾವ್ ಗುಜರ್ ಅವರು ಭಾಜನರಾಗಿದ್ದಾರೆ.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಹೆಸರಿನಲ್ಲಿ ಪ್ರತಿ ವರ್ಷ 40 ವರ್ಷದೊಳಗಿನ ಯುವ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದೆ. ದೆಹಲಿಯ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ 2022 ಹಾಗೂ 2023ನೇ ಸಾಲಿನ ಪುರಸ್ಕಾರವನ್ನು ಒಟ್ಟು 82 ಮಂದಿ ಕಲಾವಿದರಿಗೆ ಪ್ರದಾನ ಮಾಡಲಾಯಿತು. ಪುರಸ್ಕಾರವು ₹25 ಸಾವಿರ ನಗದು, ಸ್ಮರಣಿಕೆ ಮತ್ತು ಶಾಲು ಒಳಗೊಂಡಿದೆ.

ADVERTISEMENT

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಅರುಣೀಶ್ ಚಾವ್ಲಾ, ಜಂಟಿ ಕಾರ್ಯದರ್ಶಿ ಉಮಾ ನಂದುರಿ, ಸಂಗೀತ ನಾಟಕ ಅಕಾಡೆಮಿ ಉಪಾಧ್ಯಕ್ಷ ಜೋರವರ್‌ಸಿನ್ಹ ಜಾದವ್, ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ, ಕಾರ್ಯದರ್ಶಿ ರಾಜು ದಾಸ್ ಮುಂತಾದವರು ಉಪಸ್ಥಿತರಿದ್ದರು.

ನಂದಿನಿ ರಾವ್ ಅವರು ಕಳೆದ 25 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತದ ಮೂಲಕ ಆಸ್ಟ್ರೇಲಿಯಾ, ಯೂರೋಪ್, ಏಷ್ಯಾ ಹಾಗೂ ಅಮೆರಿಕ ಖಂಡಗಳ ವಿವಿಧೆಡೆ ಸಂಗೀತ ಕಛೇರಿಗಳನ್ನು ನೀಡುತ್ತಾ ಜನ ಮಾನಸ ಗೆದ್ದವರು. ಇತ್ತೀಚೆಗೆ ಅವರು ಕರ್ನಾಟಕ ಸರ್ಕಾರದ ಕೆಂಪೇಗೌಡ ಪ್ರಶಸ್ತಿಗೂ ಭಾಜನರಾಗಿದ್ದರು. 15 ಭಾರತೀಯ ಭಾಷೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.ಕೇಂಬ್ರಿಜ್ ವಿವಿ ಮತ್ತು ಅಲ್ಬರ್ಟಾ ವಿವಿಗಳೂ ಸೇರಿದಂತೆ ವಿವಿಧೆಡೆ ಸಂಗೀತ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿದ್ದಾರೆ.

ಪುಣೆಯಲ್ಲಿ 'ಸೌಂಡ್ ಆಫ್ ಸದರ್ನ್ ಇಂಡಿಯಾ' ಹೆಸರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಶಾಲೆಯ ಸಂಸ್ಥಾಪಕಿಯೂ ಆಗಿರುವ ನಂದಿನಿ ರಾವ್, ಮೂಲತಃ ಕರ್ನಾಟಕದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.